ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್; ಕೋಲ್ಕತಾ ವಿರುದ್ಧ ಡೆಲ್ಲಿಗೆ 7 ವಿಕೆಟ್ ಜಯ

ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

Published: 13th April 2019 12:00 PM  |   Last Updated: 13th April 2019 12:22 PM   |  A+A-


Delhi Capitals won by 7 wickets Against Kolkata Knight Riders

ಶತಕ ವಂಚಿತ ಧವನ್

Posted By : SVN
Source : Online Desk
ಕೋಲ್ಕತಾ: ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ  ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡ ನೀಡಿದ 179 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ (ಅಜೇಯ 97 ರನ್)ಅಮೋಘ ಬ್ಯಾಟಿಂಗ್ ನೆರವಿನಿಂದಾಗಿ 18.5 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದು ಕೊಂಡು 180 ರನ್ ಗಳಿಸಿ ಭರ್ಜರಿ ಗೆಲವು ಸಾಧಿಸಿತು. ಕೋಲ್ಕತಾ ನೀಡಿದ 179 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ದೆಹಲಿ ತಂಡಕ್ಕೆ 3ನೇ ಓವರ್ ನಲ್ಲಿ ಆಘಾತ ಎದುರಾಗಿತ್ತು. 14 ರನ್ ಗಳಿಸಿದ್ದ ಪೃಥ್ವಿ ಶಾ ಪ್ರಸಿದ್ಧ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಶ್ರೇಯಸ್ ಅಯ್ಯರ್ ಕೂಡ 6 ರನ್ ಗಳಿಸಿ ರಸೆಲ್ ವಿಕೆಟ್ ಒಪ್ಪಿಸಿದರು.

ಬಳಿಕ ಶಿಖರ್ ಧವನ್ ಜೊತೆಗೂಡಿದ ರಿಷಬ್ ಪಂತ್ ಧವನ್ ಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ 105 ರನ್ ಗಳ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಅತ್ತ ಶಿಖರ್ ಧವನ್ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಪಂತ್ ಕೂಡ 40 ರನ್ ಗಳಿಸಿ ಅರ್ಧಶತಕ ದತ್ತ ದಾಪುಗಾಲಿರಿಸಿದ್ದರು. ಆದರೆ ಈ ಹಂತದಲ್ಲಿ ಗಾಯಗೊಂಡ ಪಂತ್ ಬಳಿಕ 46 ರನ್ ಗಳಿಸಿದ್ದ ವೇಳೆ ನಿತೀಶ್ ರಾಣಾಗೆ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ಕೋಲಿನ್ ಇನ್ ಗ್ರಾಂ ಶಿಖರ್ ಧವನ್ ಜೊತೆ ಗೂಡಿ ಗೆಲುವಿನ ಔಪಚಾರಿಕತೆ ಮುಕ್ತಾಯಗೊಳಿಸಿದರು. ಈ ಹಂತದಲ್ಲಿ ಧವನ್ 97 ರನ್ ಗಳಿಸಿದ್ದರು. ಅವರ ಶತಕಕ್ಕಾಗಿ ಕೇವಲ 3 ರನ್ ಗಳ ಅವಶ್ಯಕತೆ ಇತ್ತು. 19 ಓವರ್ ನ ಐದನೇ ಎಸೆತದಲ್ಲಿ ಕೊಲಿನ್ ಇನ್ ಗ್ರಾಂ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತರಾದರೂ, ಕೇವಲ 3 ರನ್ ಗಳ ಅಂತರದಲ್ಲಿ ಶಿಖರ್ ಧವನ್ ಶತಕ ವಂಚಿತರಾದರು. ಆ ಮೂಲಕ ಡೆಲ್ಲಿ ತಂಡ  ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ಶುಭ್ ಮನ್ ಗಿಲ್ (65 ರನ್) ಮತ್ತು ಆ್ಯಂಡ್ರೆ ರೆಸಲ್ (45 ರನ್)ಅವರ  ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.

ಅಂತೆಯೇ 97 ರನ್ ಗಳಿಸಿ ಗೆಲುವು ತಂದಿತ್ತ ಶಿಖರ್ ಧವನ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Stay up to date on all the latest ಕ್ರಿಕೆಟ್ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp