ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್‌ಗೆ ಸ್ಥಾನ ಸಿಗದೇ ಇರುವುದು ಬೇಸರ ತಂದಿದೆ: ರಿಕ್ಕಿ ಪಾಂಟಿಂಗ್

ಸ್ಟಾರ್ ಆಟಗಾರ ರಿಷಭ್ ಪಂತ್ ಅವರಿಗೆ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದಕ್ಕೆ ಆಸ್ಟ್ರೇಲಿಯಾ ವಿಶ್ವ ವಿಜೇತ ತಂಡದ ನಾಯಕ, ಡೆಲ್ಲಿ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ನಿರಾಸೆ ವ್ಯಕ್ತಪಡಿಸಿದ್ದಾರೆ.

Published: 17th April 2019 12:00 PM  |   Last Updated: 17th April 2019 08:10 AM   |  A+A-


ರಿಷಬ್ ಪಂತ್-ರಿಕ್ಕಿ ಪಾಂಟಿಂಗ್

Posted By : VS VS
Source : Online Desk
ನವದೆಹಲಿ: ವಿಶ್ವಕಪ್ ಮಹಾಸಮರಕ್ಕೆ ಸ್ಟಾರ್ ಆಟಗಾರ ರಿಷಭ್ ಪಂತ್ ಅವರಿಗೆ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಲಭಿಸದಕ್ಕೆ ಆಸ್ಟ್ರೇಲಿಯಾ ವಿಶ್ವ ವಿಜೇತ ತಂಡದ ನಾಯಕ, ಡೆಲ್ಲಿ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ನಿರಾಸೆ ವ್ಯಕ್ತಪಡಿಸಿದ್ದಾರೆ. 

ರಿಕ್ಕಿ ಪಾಂಟಿಂಗ್ ಅವರು ಪಂತ್ ಪರ ಹಲವು ಬಾರಿ ಬ್ಯಾಟ್ ಮಾಡಿದ್ದರು. ಆದರೆ ಆಯ್ಕೆ ಸಮಿತಿ ಪಂತ್ ಅವರನ್ನು ಕೈ ಬಿಟ್ಟು ಎರಡನೇ ವಿಕೆಟ್ ಕೀಪರ್ ರೂಪದಲ್ಲಿ ಅನುಭವಿ ದಿನೇಶ್ ಕಾರ್ತಿಕ್ ಅವರಿಗೆ ಮಣೆ ಹಾಕಿದೆ. 

'ನಾನು ಪಂತ್ ಅವರೊಂದಿಗೆ ಸೋಮವಾರ ರಾತ್ರಿ ಮಾತನಾಡಿದ್ದು, ಅವರಿಗೆ ಕೊಂಚ ಬೇಸರವಾಗಿದೆ. ಅವರು ಬೇರೆ ಆಟಗಾರರಂತೆ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದ ನೋವು ಆಗಿದೆ. ಪಂತ್ ಗೆ ಇನ್ನು ಸಾಕಷ್ಟು ಅವಕಾಶವಿದ್ದು, ಕನಿಷ್ಠ ಮೂರರಿಂದ ನಾಲ್ಕು ವಿಶ್ವಕಪ್ ಆಡಬಲ್ಲರು' ಎಂದು ಪಾಂಟಿಂಗ್ ಅಭಿಪ್ರಾಯ ಪಟ್ಟಿದ್ದಾರೆ. 

ಭಾರತ ತಂಡದಲ್ಲಿ ಸ್ಥಾನ ಸಿಗದೇ ಇರುವುದು ಪಂತ್ ಗೆ ಕೊಂಚ ಬೇಸರ ಮೂಡಿಸಿದೆ. ಆದರೆ ಅವರು ಈ ಎಲ್ಲ ಒತ್ತಡ ಮೆಟ್ಟಿನಿಂತು ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಥಿರ ಪ್ರದರ್ಶನ ನೀಡಬಲ್ಲರು. ಈ ಹಿಂದೆ ತಿಳಿಸಿರುವಂತೆ ಪಂತ್ ಪಂದ್ಯದ ಗತಿಯನ್ನು ಬದಲಿಸಬಲ್ಲ ಆಟಗಾರ ಎಂದು ತಿಳಿಸಿದ್ದಾರೆ. 

ಪಂತ್ ಅವರು ಇನ್ನಷ್ಟು ಕಠಿಣ ಅಭ್ಯಾಸ ನಡೆಸಿ ಭಾರತ ತಂಡ ಸೇರಲಿ. ಇನ್ನು ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಏನು ಮಾಡಲು ಸಾಧ್ಯವಿಲ್ಲ. ಆದರೆ ಡೆಲ್ಲಿ ತಂಡಕ್ಕೆ ಮುಂದಿನ ದಿನಗಳಲ್ಲಿ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಹೇಳಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp