ರೋಹಿತ್ ಅರ್ಧಶತಕ, ಕೃಣಾಲ್ ಪಾಂಡ್ಯ ಸಮಯೋಚಿತ ಬ್ಯಾಟಿಂಗ್, ವಿಂಡೀಸ್ ಗೆ ಸವಾಲಿನ ಗುರಿ

2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಗೆ ಗೆಲ್ಲಲು 168 ರನ್ ಗಳ ಸವಾಲಿನ ಗುರಿ ನೀಡಿದೆ.
ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ
ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ

ಫ್ಲೋರಿಡಾ: 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಗೆ ಗೆಲ್ಲಲು 168 ರನ್ ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭಿಕ ಆಟಗಾರ ರೋಹಿತ್ ಶರ್ಮಾ 67 ರನ್ ಹಾಗೂ ಕೃಣಾಲ್ ಪಾಂಡ್ಯರ (20 ರನ್) ನೆರವಿನಿಂದಾಗಿ ಬ್ರಾಥ್ ವೇಟ್ ಪಡೆಗೆ ಗೆಲ್ಲಲು 168 ರನ್ ಗಳ ಸವಾಲಿನ ಗುರಿ ನೀಡಿದೆ.

ರೋಹಿತ್ ಶರ್ಮಾ (67 ರನ್) ಮತ್ತು ಶಿಖರ್ ಧವನ್ (23 ರನ್)ಅವರು ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 67 ರನ್ ಕಲೆ ಹಾಕಿತು. ಈ ವೇಳೆ 23 ರನ್ ಗಳಿಸಿದ್ದ ಧವನ್ ಕೀಮೋ ಪಾಲ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಕೊಹ್ಲಿ ಜೊತೆಗೂಡಿದ ರೋಹಿತ್ ಆಕರ್ಷಕ ಅರ್ಧಶತಕ ಸಿಡಿಸಿದರು. ಕೇವಲ 51 ಎಸೆತಗಳಲ್ಲಿ ರೋಹಿತ್ 67 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್ ನಲ್ಲಿ 3 ಭರ್ಜರಿ ಸಿಕ್ಸರ್ ಮತ್ತು 6 ಬೌಂಡರಿ ಸೇರಿತ್ತು.

ಬಳಿಕ ರೋಹಿತ್ ಕೂಡ ಥಾಮಸ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ರಿಷಬ್ ಪಂತ್ ಬಂದಷ್ಟೇ ವೇಗವಾಗಿ 4 ರನ್ ಗಳಿಸಿ ಮತ್ತೆ ಥಾಮಸ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಇದೇ ಹಂತದಲ್ಲಿ 23 ಎಸೆತಗಳಲ್ಲಿ 28 ರನ್ ಗಳಿಸಿದ್ದ ನಾಯಕ ನಿರಾಟ್ ಕೊಹ್ಲಿ ಕಾಟ್ರೆಲ್ ಗೆ ಕ್ಲೀನ್ ಬೋಲ್ಡ್ ಆದರು. ಅಂತಿಮ ಹಂತದಲ್ಲಿ 6ರನ್ ಗಳಿಸಿದ್ದ ಮನೀಷ್ ಪಾಂಡೇ 6ರನ್ ಗಳಿಸಿ ಕಾಟ್ರೆಲ್ ಗೆ ವಿಕೆಟ್ ಒಪ್ಪಿಸಿದರು.

ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167ರನ್ ಗಳಿಸಿತು. ಆ ಮೂಲಕ ವಿಂಡೀಸ್ ಗೆ ಗೆಲ್ಲಲು 168 ರನ್ ಗಳ ಸವಾಲಿನ ಗುರಿ ನೀಡಿದೆ.

ಇನ್ನು ವಿಂಡೀಸ್ ಪರ ಥಾಮಸ್ ಮತ್ತು ಶೆಲ್ಡನ್ ಕಾಟ್ರೆಲ್ ತಲಾ 2 ವಿಕೆಟ್ ಪಡೆದಿದ್ದು, ಕೀಮೋ ಪಾಲ್ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com