ಕ್ರಿಕೆಟ್ ಮೇಲೂ ಗ್ರಹಣ ಎಫೆಕ್ಟ್: ತಡವಾಗಿ ಆರಂಭವಾಗಲಿದೆ ರಣಜಿ ಪಂದ್ಯಗಳು

ದಶಕಕದ ಕಟ್ಟಕಡೆಯ ಸೂರ್ಯಗ್ರಹಣದ ಎಫೆಕ್ಟ್ ಕ್ರಿಕೆಟ್ ಪಂದ್ಯಗಳ ಮೇಲೂ ಆಗಿದ್ದು, ಗ್ರಹಣದ ಪರಿಣಾಮ ಭಾರತದಲ್ಲಿ ನಡೆಯುತ್ತಿರುವ ರಣಜಿ ಪಂದ್ಯಗಳ ವೇಳಾಪಟ್ಟಿಯನ್ನೇ ಬದಲಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ದಶಕಕದ ಕಟ್ಟಕಡೆಯ ಸೂರ್ಯಗ್ರಹಣದ ಎಫೆಕ್ಟ್ ಕ್ರಿಕೆಟ್ ಪಂದ್ಯಗಳ ಮೇಲೂ ಆಗಿದ್ದು, ಗ್ರಹಣದ ಪರಿಣಾಮ ಭಾರತದಲ್ಲಿ ನಡೆಯುತ್ತಿರುವ ರಣಜಿ ಪಂದ್ಯಗಳ ವೇಳಾಪಟ್ಟಿಯನ್ನೇ ಬದಲಿಸಲಾಗಿದೆ.

ಹೌದು...ಸೂರ್ಯಗ್ರಹಣದ ಎಫೆಕ್ಟ್ ಕೇವಲ ಜನಸಾಮಾನ್ಯರ ಮೇಲಷ್ಟೇ ಅಲ್ಲ ಇದೀಗ ಕ್ರಿಕೆಟ್‌ ಗೂ ತಟ್ಟಿದೆ. ಇಂದು ನಡೆಯಬೇಕಿದ್ದ ರಣಜಿ ಟ್ರೋಫಿಯ ಮೂರು ಪಂದ್ಯಗಳನ್ನು ಗ್ರಹಣದ ಪರಿಣಾಮ ತಡವಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತ ಹಿಮಾಚಲ ಪ್ರದೇಶ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಮತ್ತು ರೈಲ್ವೇಸ್ ನಡುವಿನ ಪಂದ್ಯ ಮತ್ತು ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಸೌರಾಷ್ಟ್ರ ಮತ್ತು ಉತ್ತರ ಪ್ರದೇಶಗಳ ನಡುವಿನ ಪಂದ್ಯ ತಡವಾಗಿ ಆರಂಭವಾಗಲಿದೆ.

ಮೈಸೂರಿನಲ್ಲಿ ನಡೆಯುತ್ತಿರುವ ಈ ಪಂದ್ಯ 9.30ಕ್ಕೆ ಆರಂಭವಾಗಬೇಕಿತ್ತು. ಆದರೆ ಬೆಳಗ್ಗೆ 8.04 ರಿಂದ 11.03ರ ವರೆಗೆ ಸೂರ್ಯಗ್ರಹಣ ನಡೆಯಲಿದ್ದು, ಪಂದ್ಯ ವಿಳಂಬವಾಗಿ ಆರಂಭವಾಗಲಿದೆ. ಗ್ರಹಣ ಮುಗಿದ ಬಳಿಕ 11.15ಕ್ಕೆ 2ನೇ ದಿನದಾಟ ಆರಂಭವಾಗಲಿದೆ. ಗ್ರಹಣ ಸಂಭವಿಸುವ ವೇಳೆ ಆಟಾಗಾರರು ಮೈದಾನದಲ್ಲಿರುತ್ತಾರೆ. ಕ್ರಿಕೆಟಿಗರ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಿಮಾಚಲ ವಿರುದ್ಧದ ಮೊದಲ ದಿನದಾಟದಲ್ಲಿ ಕರ್ನಾಟಕ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿರಾಸೆ ಅನುಭವಿಸಿದೆ. ನಾಯಕ ಕರುಣ್ ನಾಯರ್ 81 ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ದರು. ಕರುಣ್ ಹೊರತು ಪಡಿಸಿದರೆ ಇನ್ಯಾವ ಕ್ರಿಕೆಟಿಗರು ದಿಟ್ಟ ಹೋರಾಟ ನನೀಡಿಲ್ಲ. ಹೀಗಾಗಿ ಕೇವಲ 166 ರನ್‌ಗೆ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಹಿಮಾಚಲ ಪ್ರದೇಶ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 29 ರನ್ ಸ ಸಿಡಿಸಿದೆ. 

ಇನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಮತ್ತು ರೈಲ್ವೇಸ್ ನಡುವಿನ ಪಂದ್ಯದಲ್ಲಿ ರೈಲ್ವೇಸ್ ತಂಡ 2 ರನ್ ಗಳ ಮುನ್ನಡೆ ಪಡೆದಿದೆ. ಪ್ರಸ್ತುತ ರೈಲ್ವೇಸ್ ತಂಡ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com