ಕಂಕಣ ಸೂರ್ಯಗ್ರಹಣ: ಏನು ಮಾಡಬೇಕು? ಏನನ್ನು ಮಾಡಬಾರದು? 

ಕೇತುಗ್ರಸ್ತ ಸೂರ್ಯಗ್ರಹಣ ಗುರುವಾರ ಆರಂಭಗೊಂಡಿದ್ದು, ಬೆಳಿಗ್ಗೆ 11.11ಕ್ಕೆ ಮುಕ್ತಾಯವಾಗಲಿದೆ. ಅಪರೂಪದ ಸೂರ್ಯಕ್ರಹಣ ಭಾರತದಲ್ಲಿ ಗೋಚರಿಸಲಿದ್ದು, ಪ್ರಮುಖವಾಗಿ ಕರ್ನಾಟಕ, ವಿಶೇಷವಾಗಿ ಮೈಸೂರು, ಮಂಗಳೂರು, ಮಡಿಕೇರಿಯಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೇತುಗ್ರಸ್ತ ಸೂರ್ಯಗ್ರಹಣ ಗುರುವಾರ ಆರಂಭಗೊಂಡಿದ್ದು, ಬೆಳಿಗ್ಗೆ 11.11ಕ್ಕೆ ಮುಕ್ತಾಯವಾಗಲಿದೆ. ಅಪರೂಪದ ಸೂರ್ಯಕ್ರಹಣ ಭಾರತದಲ್ಲಿ ಗೋಚರಿಸಲಿದ್ದು, ಪ್ರಮುಖವಾಗಿ ಕರ್ನಾಟಕ, ವಿಶೇಷವಾಗಿ ಮೈಸೂರು, ಮಂಗಳೂರು, ಮಡಿಕೇರಿಯಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. 

ಸೂರ್ಯ, ಭೂಮಿಯ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಗ್ರಹಣಗಲಳ್ಲಿ ಪೂರ್ಣ, ಪಾರ್ಶ್ವ, ಕಂಕಣ ಎಂಬ 3 ವಿಧಗಳಿವೆ. ಕಂಕಣ ಗ್ರಹಣದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆ ಮಾಡುವುದಿಲ್ಲ. ಗ್ರಹಣವಾದಾಗ ಚಂದ್ರನ ಸೂತ್ತಲೂ ಬೆಳಕು ತೂರಿ ಬಂದು ಹೊಳೆಯುವ ಬಂಗಾರದ ಬಳೆಯಾಕಾರದಲ್ಲಿ ಸೂರ್ಯ ಗೋಚರಿಸುತ್ತಾನೆ. ಇದನ್ನೇ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. 

ಗ್ರಹಣ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಗ್ರಹಣ ಮನುಷ್ಯರ ಆರೋಗ್ಯ ಹಾಗೂ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಣಗಳನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಗ್ರಹಣ ಸಂದರ್ಭದಲ್ಲಿ ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ...

ಕೌತುಕ ಗ್ರಹಣ ನೋಡುವುದು ಹೇಗೆ?
ಗ್ರಹಣ ಎಂದ ಕೂಡಲೇ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ, ಗ್ರಹಣವನ್ನು ನೇರವಾಗಿ ಕಣ್ಣಿನಿಂದ ನೋಡುವುದು ಅಪಾಯಕಾರಿ. ಹೀಗಾಗಿ ಸೂರ್ಯಗ್ರಹಣವನ್ನು ನೋಡಲು ಇಚ್ಚಿಸುವವರು ವಿಜ್ಞಾನ ಕೇಂದ್ರಗಳಿಗೆ ತೆರಳಿ ಅಲ್ಲಿರುವ ಫಿಲ್ಟರ್ ಹೊಂದಿದ ಟೆಲಿಸ್ಕೋಪ್ ನಲ್ಲಿ ವೀಕ್ಷಿಸುವುದು ಉತ್ತಮ. 
ಎಕ್ಲಿಪ್ಸ್ ಗಾಗಲ್ಸ್ ಕೂಡ ಅಂಗಡಿಗಳಲ್ಲಿ ದೊರೆಯುತ್ತದೆ. ಅದನ್ನು ಖರೀದಿಸಿ ಕೂಡ ನಾವಿರುವ ಸ್ಥಳದಲ್ಲಿಯೇ ಸೂರ್ಯಗ್ರಹಣವನ್ನು ವೀಕ್ಷಿಸಬಹುದು. 
ನಂ.14ರ ವೆಲ್ಡಿಂಗ್ ಗ್ಲಾಸ್ ಗಳನ್ನು ಬಳಸಿಕೂಡ ಸೂರ್ಯಗ್ರಹಣವನ್ನು ವೀಕ್ಷಿಸಬಹುದು. 
ಅಲ್ಟ್ರಾ ವೈಲೆಟ್ ರೇಸ್, ಸೋಲಾರ್ ಫಿಲ್ಟರ್/ಸೌರ ಕನ್ನಡಕ. ಪಿನ್ ಹೋಲ್ ಕ್ಯಾಮರಾ ಬಳಸಿ ನೋಡಬಹುದು. 
ಸಣ್ಣ ಕನ್ನಡಿಯೊಂದನ್ನು ತೆಗೆದುಕೊಂಡು ಬಿಳಿ ಗೋಡೆಯ ಮೇಲೆ ಸೂರ್ಯನ ಪ್ರತಿಬಿಂಬ ಬೀಳುವಂತೆ ಮಾಡಿ. ಆ ಮೂಲಕ ಕೂಡ ಗ್ರಹಣವನ್ನು ನೋಡಬಹುದು. 

ಗ್ರಹಣ ಸಂದರ್ಭದಲ್ಲಿ ಇಂತಹ ಕೆಲಸಗಳನ್ನು ಮಾಡದಿರಿ...
ಬರಿಗಣ್ಣಿನಿಂದ ಗ್ರಹಣ ವೀಕ್ಷಿಸುವುದು ಅಪಾಯಕಾರಿಯಾಗಿರುತ್ತದೆ. ಕಾರಣ, ಇಂತಹ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಅತ್ಯಂತ ತೀಕ್ಷ್ಣವಾಗಿರುತ್ತದೆ. ಹೀಗಾಗಿ ಇದು ಕಣ್ಣಿಗೆ ಹಾನಿಯುಂಟು ಮಾಡಬಹುದು. 
ಏಕ್ಸ್ ರೇ ಶೀಟ್, ಕೂಲಿಂಗ್ ಕ್ಲಾಸ್, ಮಸಿ ಹಿಡಿದ ಗಾಜು ಹಾಗೂ ದುರ್ಬೀನುಗಳ ಬಳಕೆ ಒಳ್ಳೆಯದಲ್ಲ. 
ಕಣ್ಣುಗಳಿಗೆ ಸಂಬಂಧಿಸಿದ ರೋಗಗಳಿಂದ ಬಳಲುತ್ತಿರುವವರು ಗ್ರಹಣ ವೀಕ್ಷಿಸುವ ದುಸ್ಸಾಹಸಕ್ಕೆ ಕೈ ಹಾಕದಿರಿ. 
ಹಾಳಾದ ಸೋಲಾರ್ ಫಿಲ್ಟರ್ ಗಳನ್ನು ಬಳಕೆ ಮಾಡದಿರುವುದು ಒಳಿತು. 
ಕುತೂಹಲ ಒಳ್ಳೆಯದೆ. ಆದರೂ ಸ್ವಲ್ಪ ಎಚ್ಚರಿಕೆಯಿಂದಿರಿ. ಸೂರ್ಯನನ್ನು ಕೆಲವೇ ಸೆಕೆಂಡುಗಳಷ್ಟು ಮಾತ್ರ ವೀಕ್ಷಿಸಿ. ಪದೇ ಪದೇ ವೀಕ್ಷಣೆ ಮಾಡುವುದು ಕಣ್ಣಿಗೆ ಹಾನಿಯುಂಟಾಗುವ ಸಾಧ್ಯತೆಗಳಿರುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com