ಬಾಂಗ್ಲಾ ವಿರುದ್ಧ 'ಹೀರೋ' ಆಗಿದ್ದ ದಿನೇಶ್ ಕಾರ್ತಿಕ್ ಕಿವೀಸ್ ವಿರುದ್ಧ 'ವಿಲನ್'; ಟ್ವೀಟರಿಗರ ಆಕ್ರೋಶ

ಬಾಂಗ್ಲಾದೇಶ ವಿರುದ್ಧ ಫೈನಲ್ ಪಂದ್ಯದಲ್ಲಿ ದಿನೇಕ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸುವ ಮೂಲಕ ಹೀರೋ ಆಗಿದ್ದರು.
ದಿನೇಶ್ ಕಾರ್ತಿಕ್-ಎಂಎಸ್ ಧೋನಿ
ದಿನೇಶ್ ಕಾರ್ತಿಕ್-ಎಂಎಸ್ ಧೋನಿ
ಹ್ಯಾಮಿಲ್ಟನ್: ಬಾಂಗ್ಲಾದೇಶ ವಿರುದ್ಧ ಫೈನಲ್ ಪಂದ್ಯದಲ್ಲಿ ದಿನೇಕ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸುವ ಮೂಲಕ ಹೀರೋ ಆಗಿದ್ದರು. ಆದರೆ ನಿನ್ನೆ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ನಿರ್ಣಾಯಕ ಟಿ20 ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು ವಿಲನ್ ಆಗಿ ನೆಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 
ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಪಂದ್ಯದ ಕೊನೆಯ ಓವರ್ ನಲ್ಲಿ ಟೀಂ ಇಂಡಿಯಾಗೆ ಗೆಲ್ಲಲು 16 ರನ್ ಗಳ ಅವಶ್ಯಕತೆ ಇತ್ತು. ಈ ವೇಳೆ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಮೊದಲ ಎಸೆತದಲ್ಲಿ 2 ರನ್ ತೆಗೆದುಕೊಂಡರು. ನಂತರ 2ನೇ ಹಾಗೂ 3ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿದ್ದರೂ ತೆಗೆದುಕೊಳ್ಳದೇ ತಾವೇ ಪಂದ್ಯದವನ್ನು ಗೆಲುವಿನ ನಾಗಾಲೋಟದಲ್ಲಿ ತೆಗೆದುಕೊಂಡು ಹೋಗುವುದಾಗಿ ಬಿಂಬಿಸಿಕೊಂಡರು. 
ಆದರೆ 4ನೇ ಎಸೆತದಲ್ಲಿ ಬಿರುಸಿನ ಹೊಡೆದ ಬಾರಿಸಿದರು ನ್ಯೂಜಿಲ್ಯಾಂಡ್ ತಂಡದ ಆಟಗಾರರ ಉತ್ತಮ ಫೀಲ್ಡಿಂಗ್ ನಿಂದಾಗಿ 1 ರನ್ ತೆಗೆದುಕೊಳ್ಳುವಂತಾಯಿತು. ನಂತರ ಸ್ಟ್ರೈಕ್ ಗೆ ಬಂದ ಕೃಣಾಲ್ ಪಾಂಡ್ಯ 5ನೇ ಎಸೆತದಲ್ಲಿ 1 ರನ್ ತೆಗೆದುಕೊಂಡರು. ಅಲ್ಲಿಗೆ ಪಂದ್ಯ ಸೋಲು ಖಚಿತವಾಗಿತ್ತು. ಇನ್ನು 6ನೇ ಎಸೆತವನ್ನು ಬೌಲರ್ ವೈಡ್ ಮಾಡಿದ್ದರು. ಕೊನೆಯ ಎಸೆತದಲ್ಲಿ ಗೆಲುವಿಗೆ 10 ಬೇಕಿತ್ತು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಪಂದ್ಯ 4 ರನ್ ಗಳಿಂದ ಸೋಲುವಂತಾಯಿತು. 
ಇದರಿಂದ ಬೇಸರಗೊಂಡಿರುವ ನೆಟಿಗರು ದಿನೇಶ್ ಕಾರ್ತಿಕ್ ವಿರುದ್ಧ ಕಿಡಿಕಾರಿದ್ದಾರೆ. 2ನೇ ಹಾಗೂ 3ನೇ ಎಸೆತದಲ್ಲಿ ಸಿಂಗಲ್ಸ್ ತೆಗೆದುಕೊಳ್ಳದೇ ತಾವೇ ಬ್ಯಾಟ್ ಬೀಸಿದಕ್ಕೆ ನೆಟಿಗರು ಆಕ್ರೋಶಗೊಂಡು ನಿನ್ನನ್ನ ನೀನು ಧೋನಿ ಅಂದುಕೊಂಡಿದ್ದೀಯ ಎಂದು ಪ್ರಶ್ನಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com