ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನಾಳೆ ಭಾರತ-ಆಸ್ಟ್ರೇಲಿಯಾ ನಡುವೆ ಮೊದಲ ಟಿ-20 ಪಂದ್ಯ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯ ನಾಳೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ವೈ. ಆರ್‌ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿಶಾಖಪಟ್ಟಣಂ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯ ನಾಳೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ವೈ. ಆರ್‌ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐಸಿಸಿ ವಿಶ್ವಕಪ್‌ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಚುಟುಕು ಹಾಗೂ ಐದು ಪಂದ್ಯಗಳ ಏಕದಿನ ಸರಣಿ ಕೊನೆಯದ್ದಾಗಿದ್ದು, ಜಾಗತಿಕ ಶ್ರೇಷ್ಠ ಟೂರ್ನಿಗೂ ಮುನ್ನ ತಂಡದ ತಪ್ಪುಗಳನ್ನು ತಿದ್ದಿಕೊಳ್ಳಲು ಭಾರತದ ಪಾಲಿಗೆ ಕೊನೆಯ ಅವಕಾಶವಾಗಿದೆ. ಆದರೆ, ಆಸ್ಟ್ರೇಲಿಯಾಗೆ ಈ ಸರಣಿ ಬಳಿಕ ಪಾಕಿಸ್ತಾನದ ವಿರುದ್ಧ ಮತ್ತೊಂದು ಸರಣಿ ಇದೆ.
ಈ ಸರಣಿ ಬಳಿಕ ಭಾರತ ತಂಡದ ಆಟಗಾರರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಲಿದ್ದಾರೆ. ಇದಾದ ಬಳಿಕ ವಿಶ್ವಕಪ್‌ ಆಡಲು ನೇರವಾಗಿ ಇಂಗ್ಲೆಂಡ್‌ಗೆ ಭಾರತ ತಂಡ ತೆರಳಲಿದೆ. 
ಕಳೆದ ನ್ಯೂಜಿಲೆಂಡ್‌ ವಿರುದ್ಧದ ಎರಡು ಏಕದಿನ ಪಂದ್ಯಗಳು ಹಾಗೂ ಟಿ-20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್‌ ಕೊಹ್ಲಿ ಮತ್ತೆ ತಂಡಕ್ಕೆ ಮರಳಿದ್ದಾರೆ.
ಕಾಂಗೂರು ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಯನ್ನೂ ಗೆದ್ದು ಭಾರತ ಇತಿಹಾಸ ಸೃಷ್ಠಿಸಿತ್ತು. ಇದೀಗ ಅದೇ ತಂಡದ ವಿರುದ್ಧ ತವರು ನೆಲದಲ್ಲಿ ಎರಡು ಟಿ-20 ಹಾಗೂ ಐದು ಪಂದ್ಯಗಳ ಏಕದಿನ ಸರಣಿ ಆಡಲು ಭಾರತ ತಂಡ ಸಜ್ಜಾಗಿದೆ. 
ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಅಂತಿಮಗೊಳಿಸಲು ನಾಯಕ ವಿರಾಟ್‌ ಕೊಹ್ಲಿಗೆ ಈ ಸರಣಿ ಅತ್ಯಂತ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಬೌಲಿಂಗ್‌ ವೇಗದ ವಿಭಾಗದಲ್ಲಿ ಕಳೆದ ಸರಣಿಯಲ್ಲಿ ಭಾರತ ಹೇಳಿಕೊಳ್ಳುವಷ್ಟು ಉತ್ತಮ ಪ್ರದರ್ಶನ ತೋರಿಲ್ಲ. ಆದರೆ ಸ್ಪಿನ್‌ ವಿಭಾಗದಲ್ಲಿ ಯಜುವೇಂದ್ರ ಚಾಹಲ್‌ ಹಾಗೂ ಕುಲ್ದೀಪ್‌ ಯಾದವ್‌ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇವರಿಬ್ಬರು ವಿಶ್ವಕಪ್‌ ತಂಡದಲ್ಲಿ ಆಡಿಸುವುದು ಬಹುತೇಕ ಖಚಿತ ಎಂದು ಹೇಳಬಹುದಾಗಿದೆ.
ಚುಟುಕು ಭಾರತ ತಂಡದಲ್ಲಿ ಕಾಣಿಸಿಕೊಂಡಿರುವ ಹೊಸ ಮುಖ ಮಯಾಂಕ್‌ ಮಾರ್ಕಂಡೆ ಅವರು ಕೂಡ ಕುಲ್ದೀಪ್‌ ಶೈಲಿಯ ಸ್ಪಿನ್ನರ್‌ ಆಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಭುವನೇಶ್ವರ್‌ ಕುಮಾರ್ ಅನುಪಸ್ಥಿತಿಯಲ್ಲಿ ಸಿದ್ಧಾರ್ಥ್ ಕೌಲ್‌ ಗೆ ಅವಕಾಶ ನೀಡಲಾಗಿದೆ. ಜತೆಗೆ, ಹಿರಿಯ ವೇಗಿ ಉಮೇಶ್‌ ಯಾದವ್‌ ಅವರಿಗೆ ಮೊದಲ ಪಂದ್ಯದಲ್ಲಿ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕು. 
 ಎದುರಾಳಿ ಆಸ್ಟ್ರೇಲಿಯಾ, ಭಾರತ ವಿರುದ್ಧ ತವರಿನಲ್ಲಿ ಟೆಸ್ಟ್‌ ಹಾಗೂ ಏಕದಿನ ಸರಣಿ ಸೋತಿರುವ ಗುಂಗಿನಲ್ಲಿದ್ದು, ಸೇಡು ತೀರಿಸಿಕೊಳ್ಳುವ ತುಡಿತದಲ್ಲಿದೆ. ಆಸ್ಟ್ರೇಲಿಯಾ ಚುಟುಕು ಮಾದರಿಯಲ್ಲಿ ಉತ್ತಮ ತಂಡವಾಗಿದೆ.  ಅಲ್ಲದೇ, ಆಸೀಸ್‌ ತಂಡದಲ್ಲಿರುವ ಹಲವು ಆಟಗಾರರು ಭಾರತದ ನೆಲದಲ್ಲಿ ಐಪಿಎಲ್‌ ಆಡಿರುವ ಅನುಭವ ಹೊಂದಿದ್ದಾರೆ. 
ಸಂಭಾವ್ಯ ಆಟಗಾರರು
ಭಾರತ: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ರಿಷಬ್ ಪಂತ್, ಎಂ.ಎಸ್. ಧೋನಿ(ವಿ.ಕೀ), ದಿನೇಶ್ ಕಾರ್ತಿಕ್, ಹಾರ್ಡಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ, ಸಿದ್ದಾರ್ಥ್ ಕೌಲ್, ಯಜುವೇಂದ್ರ ಚಾಹಲ್.
ಆಸ್ಟ್ರೇಲಿಯಾ: ಆ್ಯರೊನ್‌ ಫಿಂಚ್‌( ನಾಯಕ), ಆರ್ಸಿ ಶಾರ್ಟ್‌, ಪೀಟರ್‌ ಹ್ಯಾಂಡ್ಸ್‌ಕೊಂಬ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್‌ ಕ್ಯಾರಿ, ನಥಾನ್‌ ಲಿಯಾನ್‌, ನತಾನ್‌ ಕೌಲ್ಟರ್‌ ನೈಲ್‌, ಜೇ ರಿಚರ್ಡ್ಸನ್‌, ಆ್ಯಡಂ ಝಂಪಾ, ಜೇಸನ್‌ ಬೆಹ್ರನ್‌ಡ್ರಾಪ್‌.
ಸಮಯ: ಮಧ್ಯಾಹ್ನ 01:30
ಸ್ಥಳ: ವೈ. ಆರ್‌ ರಾಜಶೇಖರ್‌ ರೆಡ್ಡಿ ಕ್ರೀಡಾಂಗಣ, ವಿಶಾಖಪಟ್ಟಣಂ

Related Stories

No stories found.

Advertisement

X
Kannada Prabha
www.kannadaprabha.com