ಮತ್ತೆ ಕಾಡಿದ ಧೋನಿ ಅನುಪಸ್ಥಿತಿ, ಕೇವಲ 92 ರನ್ ಗಳಿಗೆ ಭಾರತ ಆಲೌಟ್!

ವಿಶ್ವದ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ತಂಡ ಎಂಬ ಖ್ಯಾತಿಗೆ ಭಾಜನವಾಗಿರುವ ಭಾರತ ತಂಡ ಹ್ಯಾಮಿಲ್ಟನ್ ನಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಅಕ್ಷರಶಃ ತನ್ನ ಖ್ಯಾತಿಗೆ ಅಪಮಾನ ತರುವಂತೆ ಆಡಿದೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಬೌಲ್ಟ್
ವಿಕೆಟ್ ಪಡೆದ ಸಂಭ್ರಮದಲ್ಲಿ ಬೌಲ್ಟ್
ಹ್ಯಾಮಿಲ್ಟನ್: ವಿಶ್ವದ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ತಂಡ ಎಂಬ ಖ್ಯಾತಿಗೆ ಭಾಜನವಾಗಿರುವ ಭಾರತ ತಂಡ ಹ್ಯಾಮಿಲ್ಟನ್ ನಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಅಕ್ಷರಶಃ ತನ್ನ ಖ್ಯಾತಿಗೆ ಅಪಮಾನ ತರುವಂತೆ ಆಡಿದೆ.
ಹೌದು.. ಹ್ಯಾಮಿಲ್ಟನ್ ನ ಸೆಡ್ಡಾಪ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬಲಿಷ್ಠ ಬ್ಯಾಟ್ಸಮನ್ ಗಳು ನ್ಯೂಜಿಲೆಂಡ್ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಕಿವೀಸ್ ಪಡೆಯ ಟ್ರೆಂಟ್ ಬೌಲ್ಟ್, ಗ್ರಾಂಡ್ ಹೋಮ್ ದಾಳಿಗೆ ಪತರಗುಟ್ಟಿದ ಭಾರತ ತಂಡ ಕೇವಲ 92 ರನ್ ಗಳಿಗೆ ಆಲೌಟ್ ಆಗಿದೆ. 
ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಗಳಿಸಿದ 16 ರನ್ ಗಳೇ ತಂಡದ ಪರ ವೈಯುಕ್ತಿಕ ಗರಿಷ್ಠ ರನ್ ಗಳಿಕೆ ಎಂದರೆ ತಂಡ ಬ್ಯಾಟಿಂಗ್ ಹೇಗಿತ್ತು ಎಂಬುದರ ಪರಿಕಲ್ಪನೆ ಸಿಗುತ್ತದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡದ ಪರ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಇನ್ನಿಂಗ್ಸ್ ನ 6ನೇ ಓವರ್ ನಲ್ಲೇ 13 ರನ್ ಗಳಿಸಿದ್ದ ಧವನ್ ಎಲ್ ಬಿ ಬಲೆಗೆ ಬಿದ್ದರು. ಬಳಿಕ 8 ನೇ ಓವರ್ ನ ಅಂತಿಮ ಎಸೆತದಲ್ಲಿ 7 ರನ್ ಗಳಿಸಿದ್ದ ರೋಹಿತ್ ಶರ್ಮಾ ಕೂಡ ಬೌಲ್ಟ್ ಬೌಲಿಂಗ್ ನಲ್ಲಿ ಔಟ್ ಆದರು. ಇವರ ಬೆನ್ನಲ್ಲೇ ಅಂಬಾಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾಗುವ ಮೂಲಕ ತೀವ್ರ ನಿರಾಸೆ ಮೂಡಿಸಿದರು.  ಇಂದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿರುವ ಶುಭ್ ಮನ್ ಗಿಲ್ ಕೂಡ ತಮ್ಮ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿಫಲರಾಗಿ ಕೇವಲ 9 ರನ್ ಗಳಿಗೆ ತಮ್ಮ ವಿಕೆಟ್ ಕೈ ಚೆಲ್ಲಿದರು. 
ಬಳಿಕ ಬಂದ ಕೇದಾರ್ ಜಾದವ್ ಕೇವಲ 1 ರನ್ ಗಳಿಸಿ ಮತ್ತದೇ ಬೌಲ್ಟ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಬಂದ ಭುವನೇಶ್ವರ್ ಕುಮಾರ್ ಕೂಡ ಕೇವಲ 1 ರನ್ ಗಳಿಸಿ ಗ್ರಾಂಡ್ ಹೋಮ್ ಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಸತತ 3 ಬೌಂಡಿರ ಬಾರಿಸಿ ನಿರೀಕ್ಷೆ ಮೂಡಿಸಿದ್ದ ಹಾರ್ದಿಕ್ ಪಾಂಡ್ಯ ಕೂಡ ಕೇವಲ 16 ರನ್ ಗಳಿಸಿ ಬೌಲ್ಟ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಅಂತಿಮ ಹಂತದಲ್ಲಿ ಕಿವೀಸ್ ಬೌಲರ್ ಗಳ ಎದುರು ಕುಲದೀಪ್ ಯಾದವ್ (15 ರನ್) ಮತ್ತು ಯಜುವೇಂದ್ರ ಚಾಹಲ್ ಕೊಂಚ ಪ್ರತಿರೋಧ ತೋರಿದರಾದರೂ, 15 ರನ್ ಗಳಿಸಿದ್ದ ಕುಲದೀಪ್ ಯಾದವ್ ಟಾಡ್ ಆ್ಯಸ್ಟಲ್ ಬೌಲಿಂಗ್ ನಲ್ಲಿ ಔಟ್ ಆದರು. ಅಂತಿಮವಾಗಿ  ರನ್ ಗಳಿಸಿದ್ದ ಖಲೀಲ್ ಅಹ್ಮದ್ ಕೂಡ ನೀಶಮ್ ಬೌಲಿಂಗ್ ನಲ್ಲಿ ಬೋಲ್ಡ್ ಆಗುವುದರೊಂದಿಗೆ ಕೇವಲ 92 ರನ್ ಗಳಿಗೆ ಭಾರತದ ಇನ್ನಿಂಗ್ಸ್ ಗೆ ತೆರೆ ಬಿತ್ತು. 
ಆ ಮೂಲಕ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ ಗೆಲ್ಲಲು ಭಾರತ ತಂಡ 93 ರನ್ ಗಳ ಅಲ್ಪ ಮೊತ್ತದ ಗುರಿ ನೀಡಿದೆ. ಇನ್ನು ಕಿವೀಸ್ ಪರ ಟ್ರೆಂಟ್ ಬೌಲ್ಟ್  ವಿಕೆಟ್ ಪಡೆದು ಮಿಂಚಿದರೆ, ಗ್ರಾಂಡ್ ಹೋಮ್ 3 ವಿಕೆಟ್ ಕಬಳಿಸಿದರು. ಅಂತೆಯೇ ಟಾಡ್ ಆ್ಯಸ್ಟಲ್ ಮತ್ತು ನೀಶಮ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com