ಐಸಿಸಿ ವಿಶ್ವಕಪ್ 2019: ಟೂರ್ನಿಯಲ್ಲಿ ಪಾಲ್ಗೊಂಡ ಯಾವ ತಂಡಕ್ಕೆ ಎಷ್ಟು ಹಣ ಗೊತ್ತಾ?

ಐಸಿಸಿ ವಿಶ್ವಕಪ್ ಮುಕ್ತಾಯವಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಲ್ಲ 10 ತಂಡಗಳೂ ತಮ್ಮ ತಮ್ಮ ಮುಂದಿನ ಕ್ರಿಕೆಟ್ ಸರಣಿಗಾಗಿ ತವರಿನತ್ತ ಮುಖ ಮಾಡಿವೆ. ಆದರೆ ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳು ಎಷ್ಟೆಷ್ಟು ಹಣ ಪಡೆದವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಐಸಿಸಿ ವಿಶ್ವಕಪ್ ಮುಕ್ತಾಯವಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಲ್ಲ 10 ತಂಡಗಳೂ ತಮ್ಮ ತಮ್ಮ ಮುಂದಿನ ಕ್ರಿಕೆಟ್ ಸರಣಿಗಾಗಿ ತವರಿನತ್ತ ಮುಖ ಮಾಡಿವೆ. ಆದರೆ ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳು ಎಷ್ಟೆಷ್ಟು ಹಣ ಪಡೆದವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ತೀವ್ರ ಕುತೂಹಲ ಕೆರಳಿ ಅಷ್ಟೇ ಕುತೂಹಲ ಮತ್ತು ರೋಚಕತೆಯ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿದೆ. ರೋಟಕ ಟೈ, ಸೂಪರ್ ಓವರ್ ಕೂಡ ಟೈ ಆಗುವುದರೊಂದಿಗೆ ಪಂದ್ಯದಲ್ಲಿ ಗರಿಷ್ಠ ಬೌಂಡರಿ ಬಾರಿಸಿದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಣೆ ಮಾಡಿ ಟ್ರೋಫಿ ನೀಡಲಾಗಿದೆ. ಟ್ರೋಫಿಯಿಂದಿಗೆ ಇಂಗ್ಲೆಂಡ್ ತಂಡಕ್ಕೆ ನಗದು ಹಣವನ್ನೂ ಕೂಡ ನೀಡಲಾಗಿದ್ದು, ಪ್ರಶಸ್ತಿ ಗೆದ್ದ ಇಂಗ್ಲೆಂಡ್ ತಂಡಕ್ಕೆ 29,05,82,040 ರೂ ನೀಡಲಾಗಿದೆ. 
ಇನ್ನು ರನ್ನರ್ ಅಪ್ ನ್ಯೂಜಿಲೆಂಡ್ ತಂಡಕ್ಕೆ 15,07,73,700 ರೂ ನೀಡಲಾಗಿದ್ದು, ಇದರೊಂದಿಗೆ ನ್ಯೂಜಿಲೆಂಡ್ ತಂಡದ ಶ್ರೇಯಾಂಕದ ಅಂಕಕೂಡ ನೀಡಲಾಗಿದೆ. ಇನ್ನು ಟೂರ್ನಿಯ ಟೇಬಲ್ ಟಾಪರ್ ಟೀಂ ಇಂಡಿಯಾಗೆ 7,40,16,180 ರೂ ನೀಡಲಾಗಿದ್ದು, 2ನೇ ತಂಡವಾಗಿರುವ ಆಸ್ಟ್ರೇಲಿಯಾಗೂ 7,40,16,180 ರೂ ನೀಡಲಾಗಿದೆ. ಉಳಿದಂತೆ ಪಾಕಿಸ್ತಾನಕ್ಕೆ 2,05,60,050 ರೂ, ಶ್ರೀಲಂಕಾಗೆ 1,50,77,370 ರೂ, ದಕ್ಷಿಣ ಆಫ್ರಿಕಾಗೆ 1,50,77,370 ರೂ, ಬಾಂಗ್ಲಾದೇಶಕ್ಕೆ 1,50,77,370 ರೂ, ವೆಸ್ಟ್ ಇಂಡೀಸ್ ಗೆ 1,23,36,030 ರೂ ಮತ್ತು ಆಫ್ಘಾನಿಸ್ತಾನಕ್ಕೆ 68,53,350 ರೂ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com