ವಿಶ್ವಕಪ್ 2019: ಕಠಿಣ ಸ್ಪರ್ಧೆ ನೀಡಿ ಆಸ್ಟ್ರೇಲಿಯಾ ವಿರುದ್ಧ ಸೋತ ಆಫ್ಗಾನಿಸ್ತಾನ!

ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುತ್ತಿದ್ದ ಆಫ್ಗಾನಿಸ್ತಾನ ಸದ್ಯ ತಕ್ಕ ಮಟ್ಟಿಗೆ ಬಲಿಷ್ಠವಾಗುತ್ತಿದೆ. ವಿಶ್ವಕಪ್ ನಲ್ಲಿ ಸ್ಥಾನ ಪಡೆದಿರುವ ಆಫ್ಗಾನಿಸ್ತಾನ ಆಸ್ಟ್ರೇಲಿಯಾಗೆ ಕಠಿಣ ಸ್ಪರ್ಧೆ ನೀಡಿ ಸೋತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುತ್ತಿದ್ದ ಆಫ್ಗಾನಿಸ್ತಾನ ಸದ್ಯ ತಕ್ಕ ಮಟ್ಟಿಗೆ ಬಲಿಷ್ಠವಾಗುತ್ತಿದೆ. ವಿಶ್ವಕಪ್ ನಲ್ಲಿ ಸ್ಥಾನ ಪಡೆದಿರುವ ಆಫ್ಗಾನಿಸ್ತಾನ ಆಸ್ಟ್ರೇಲಿಯಾಗೆ ಕಠಿಣ ಸ್ಪರ್ಧೆ ನೀಡಿ ಸೋತಿದೆ.
ಲಂಡನ್ ನ ಬ್ರಿಸ್ಟೋಲ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಗಾನಿಸ್ತಾನ 207 ರನ್ ಗಳಿಗೆ ಆಲೌಟ್ ಆಯಿತು. 208 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 209 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಆಫ್ಗಾನಿಸ್ತಾನ ಪರ ರಹಮತ್ ಶಾ 43, ಹಸ್ಮತುಲ್ಲಾ ಶಾಹಿದ್ 18, ಗುಲ್ಬದಿನ್ ನಬಿ 31, ನಜಿಬುಲ್ಲಾ ಜದ್ರಾನ್ 51 ಮತ್ತು ರಶೀದ್ ಖಾನ್ 27 ರನ್ ಪೇರಿಸಿದ್ದಾರೆ.
ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಕಮ್ಮಿನ್ಸ್ ಮತ್ತು ಜಂಪಾ ತಲಾ 3 ವಿಕೆಟ್, ಸ್ಟೋಯ್ನಿಸ್ 2 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ಪರ ಬ್ಯಾಟಿಂಗ್ ನಲ್ಲಿ ಪಿಂಚ್ 66, ಡೇವಿಡ್ ವಾರ್ನರ್ ಅಜೇಯ 89, ಸ್ಮಿತ್ 18 ರನ್ ಪೇರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com