ಟೀಂ ಇಂಡಿಯಾ ಆತ್ಮಸ್ಥೈರ್ಯ ಹೆಚ್ಚಾಗಿದ್ದು, ಪಾಕ್ ವಿರುದ್ಧ ಗೆಲುವು ಸಾಧಿಸಲಿದೆ: ಅಭಿಮಾನಿ ಸುಧೀರ್ ಗೌತಮ್

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಆತ್ಮಸ್ಥೈರ್ಯ ತುಂಬಾ ಹೆಚ್ಚಾಗಿದ್ದು, ಖಂಡಿತಾ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಲಿದೆ ಎಂದು ಭಾರತ ತಂಡದ ಅಭಿಮಾನಿ ಸುಧೀರ್ ಗೌತಮ್ ಹೇಳಿದ್ದಾರೆ.

Published: 15th June 2019 12:00 PM  |   Last Updated: 15th June 2019 11:27 AM   |  A+A-


Team India's morale is very high & they'll win against Pakistan: Sudhir Gautam

ಅಭಿಮಾನಿ ಸುಧೀರ್ ಗೌತಮ್

Posted By : SVN SVN
Source : ANI
ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಆತ್ಮಸ್ಥೈರ್ಯ ತುಂಬಾ ಹೆಚ್ಚಾಗಿದ್ದು, ಖಂಡಿತಾ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಲಿದೆ ಎಂದು ಭಾರತ ತಂಡದ ಅಭಿಮಾನಿ ಸುಧೀರ್ ಗೌತಮ್ ಹೇಳಿದ್ದಾರೆ.

ನಾಳಿನ ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ನಾಟಿಂಗ್ ಹ್ಯಾಮ್ ಗೆ ತೆರಳಿರುವ ಸುಧೀರ್ ಗೌತಮ್ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. 'ಪ್ರಸ್ತುತ ಭಾರತ ತಂಡ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಆಡಿರುವ 2 ಪಂದ್ಯಗಳಲ್ಲಿ ಭರ್ಜರಿ ಜಯ ಕಂಡಿದೆ. ತಂಡದ ಬ್ಯಾಟ್ಸ್ ಮನ್ ಗಳು, ಬೌಲರ್ ಗಳು ಉತ್ತಮ ಲಯದಲ್ಲಿದ್ದು, ಯಾವುದೇ ತಂಡಕ್ಕೂ ಕಠಿಣ ಸ್ಪರ್ಧೆ ನೀಡಲಿದೆ ಎಂದು ಹೇಳಿದ್ದಾರೆ.

ಅಂತೆಯೇ ಭಾರತ ಪಾಕ್ ಅಭಿಮಾನಿಗಳಿಗೆ ಸಲಹೆ ಕೂಡ ನೀಡಿರುವ ಸುಧೀರ್, ಕ್ರೀಡೆ ಉಭಯ ದೇಶಗಳ ನಡುವಿನ ಸೌಹಾರ್ಧ ಸಂಬಂಧದ ಕೊಂಡಿಯಾಗಿರಬೇಕು. ನಾನು ಈ ಮೂಲಕ ಎಲ್ಲ ಅಭಿಮಾನಿಗಳಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇನೆ. ಕ್ರಿಕೆಟ್ ಅನ್ನು ಕ್ರಿಕೆಟ್ ಆಗಿ ಮಾತ್ರ ನೋಡಿ, ಇದು ಯುದ್ಧವಲ್ಲ. ಸಂಯಮ ಕಾಯ್ದುಕೊಳ್ಳಿ ಎಂದು ಸುಧೀರ್ ಗೌತಮ್ ಹೇಳಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp