ಹಶೀಮ್ ಆಮ್ಲಾ: ಎಬಿಡಿ ವಿಲಿಯರ್ಸ್​​, ರೋಹಿತ್ ಶರ್ಮಾ​, ಗಂಗೂಲಿ ದಾಖಲೆ ಧೂಳಿಪಟ, ಸ್ವಲ್ಪದರಲ್ಲಿ ಕೊಹ್ಲಿ ದಾಖಲೆ ಮಿಸ್!

ವಿರಾಟ್ ಕೊಹ್ಲಿ ದಾಖಲೆ ಹಿಂದೆ ಬಿದಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ, ದಾಖಲೆಗಳ ರೇಸ್ ನಲ್ಲಿ ಕೊಹ್ಲಿ ದಾಖಲೆ ಮುರಿಯವಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದ್ದಾರೆ.

Published: 21st June 2019 12:00 PM  |   Last Updated: 21st June 2019 03:06 AM   |  A+A-


ICC World Cup 2019: Hashim Amla second fastest behind Virat Kohli to score 8000 ODI runs

ಸಂಗ್ರಹ ಚಿತ್ರ

Posted By : SVN SVN
Source : Online Desk
ಲಂಡನ್: ವಿರಾಟ್ ಕೊಹ್ಲಿ ದಾಖಲೆ ಹಿಂದೆ ಬಿದಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ, ದಾಖಲೆಗಳ ರೇಸ್ ನಲ್ಲಿ ಕೊಹ್ಲಿ ದಾಖಲೆ ಮುರಿಯವಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದ್ದಾರೆ.

ಹೌದು... ಈ ಹಿಂದೆ ಕೊಹ್ಲಿಯ ವೇಗದ 5 ಸಾವಿರ, 6 ಸಾವಿರ ಮತ್ತು 7 ಸಾವಿರ ರನ್ ಗಳ ದಾಖಲೆ ಹಿಂದೆ ಬಿದಿದ್ದ ಹಶೀಮ್ ಆಮ್ಲಾ ವೇಗದ 8 ಸಾವಿರ ರನ್ ದಾಖಲೆ ಮುರಿಯುವಲ್ಲಿ ವಿಫಲರಾಗಿದ್ದಾರೆ. ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಮ್ಲಾ55 ರನ್ ಗಳಿಸುವ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ 2ನೇ ವೇಗದ 8 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಆಮ್ಲಾ ತಮ್ಮದೇ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್, ಭಾರತದ ರೋಹಿತ್ ಶರ್ಮಾ ಮತ್ತು ಭಾರತದ ಮಾಜಿ ನಾಯಕ ಲೆಜೆಂಡ್ ಸೌರವ್ ಗಂಗೂಲಿ ಅವರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.

2 ಸಾವಿರ ರನ್​​ದಿಂದ 7 ಸಾವಿರದವರೆಗೆ ಅತಿ ವೇಗವಾಗಿ ರನ್​ ಪೂರೈಕೆ ಮಾಡಿರುವ ಪಟ್ಟಿಯಲ್ಲಿ ಆಮ್ಲಾ ಮೊದಲ ಸ್ಥಾನದಲ್ಲಿದ್ದರು.

ಆಮ್ಲಾ ಒಟ್ಟು 176 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಪೂರೈಸಿದ್ದು, ದಕ್ಷಿಣ ಆಫ್ರಿಕಾ ಪರ ಅತಿ ವೇಗವಾಗಿ 8 ಸಾವಿರ ರನ್​ ಪೂರೈಕೆ ಮಾಡಿರುವ ಮೊದಲ ಆಟಗಾರ​ ಎಂಬ ಕೀರ್ತಿಗೂ ಆಮ್ಲಾ ಭಾಜನರಾಗಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 175 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಪೂರೈಸಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಉಳಿದಂತೆ ಆಫ್ರಿಕಾದ ಎಬಿಡಿ ವಿಲಿಯರ್ಸ್ ಈ ದಾಖಲೆಗೆ 182 ಇನ್ನಿಂಗ್ಸ್​​ ತೆಗೆದುಕೊಂಡಿದ್ದರೆ, ಭಾರತದ ರೋಹಿತ್ ಶರ್ಮಾ ಮತ್ತು ಸೌರವ್ ಗಂಗೂಲಿ 200 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp