ತವರು ಮೈದಾನದಲ್ಲಿ ಎಂಎಸ್ ಧೋನಿಯ ಚಾಣಾಕ್ಷ ರನೌಟ್, ವಿಡಿಯೋ ವೈರಲ್!

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿ ಚಾಣಾಕ್ಷವಾಗಿ ರನೌಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಎಂಎಸ್ ಧೋನಿ
ಎಂಎಸ್ ಧೋನಿ
ರಾಂಚಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿ ಚಾಣಾಕ್ಷವಾಗಿ ರನೌಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ರಾಂಚಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ಮ್ಯಾಕ್ಸ್ ವೆಲ್ ರನ್ನು ರನೌಟ್ ಬಲೆಗೆ ಕೆಡವಿದರು. ಕುಲದೀಪ್ ಯಾದವ್ ಎಸೆದ ಓವರ್ ನಲ್ಲಿ ಮಾರ್ಷ್ ಲೆಗ್ ಸೈಡ್ ನಲ್ಲಿ ಬಾರಿಸಿ ಒಂದು ರನ್ ಪಡೆಯಲು ಮುಂದಾದರು. ಈ ವೇಳೆ ವೇಗವಾಗಿ ಚೆಂಡನ್ನು ಹಿಡಿದ ರವೀಂದ್ರಾ ಜಡೇಜಾ ಎಂಎಸ್ ಧೋನಿಗೆ ಎಸೆದರೂ ಒಂದು ಪಿಚ್ ಆಗಿ ಕೈಗೆ ಬಂದ ಚೆಂಡನ್ನು ಧೋನಿ ಗ್ಲೈಸ್ ನಲ್ಲಿ ಬಡೆದು ವಿಕೆಟ್ ಗೆ ತಗಲುವಂತೆ ಮಾಡಿದರು. 
ವೇಗವಾಗಿ ಬರುತ್ತಿದ್ದ ಮ್ಯಾಕ್ಸ್ ವೆಲ್ ಕ್ರಿಸ್ ಮುಟ್ಟುವ ಮೊದಲೇ ಧೋನಿ ರನೌಟ್ ಮಾಡಿದ್ದರು. ಒಟ್ಟಿನಲ್ಲಿ ಎಂಎಸ್ ಧೋನಿ ವಿಕೆಟ್ ಹಿಂದೆ ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com