ಐಸಿಸಿ ವಿಶ್ವಕಪ್‌: ಇಂಗ್ಲೆಂಡ್‌ಗೆ ತೆರಳಲು 15 ಸಮರ್ಥ ಆಟಗಾರರ ಭಾರತ ತಂಡ ರೆಡಿ: ರವಿಶಾಸ್ತ್ರಿ

ಐಸಿಸಿ ವಿಶ್ವಕಪ್‌ಗೆ ಟೀಂ ಇಂಡಿಯಾ ಸರ್ವ ಸನ್ನದ್ಧವಾಗಿದ್ದು ಅಲ್ಲಿನ ವಾತಾವರಣಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲಿದೆ ಎಂದು ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಟೀಂ ಇಂಡಿಯಾ
ಟೀಂ ಇಂಡಿಯಾ
ನವದೆಹಲಿ: ಐಸಿಸಿ ವಿಶ್ವಕಪ್‌ಗೆ ಟೀಂ ಇಂಡಿಯಾ ಸರ್ವ ಸನ್ನದ್ಧವಾಗಿದ್ದು ಅಲ್ಲಿನ ವಾತಾವರಣಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲಿದೆ ಎಂದು ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. 
ಇದೇ 30ರಂದು ಇಂಗ್ಲೆಂಡ್‌ ನ ವೇಲ್ಸ್‌ನಲ್ಲಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಇನ್ನು 15 ಸದಸ್ಯರ ಭಾರತ ತಂಡದಲ್ಲಿ ವಿಜಯ್‌ ಶಂಕರ್ ಅವರು ಸ್ಥಾನ ಪಡೆದಿದ್ದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಬಹುದು. ಆದರೆ ಈ ಕ್ರಮಾಂಕದಲ್ಲಿ ಇವರೊಬ್ಬರೆ ಆಡಬೇಕಂತೆನಿಲ್ಲ. ಇತರೆ ಆಟಗಾರರು ಈ ಕ್ರಮಾಂಕಕ್ಕೆ ಇದ್ದಾರೆ. ಹಾಗಾಗಿ, ಇದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ" ಎಂದರು. 
"ಇದೀಗ ಅಂತಿಮಗೊಳಿಸಿರುವ ಭಾರತ ತಂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠ ಹಾಗೂ ಹೊಂದಿಕೊಳ್ಳುವಂತಿದೆ. ಯಾವಾಗ ಬೇಕಾದರೂ ತಂಡಕ್ಕೆ ಆಸರೆಯಾಗುವ ಸಾಮಾರ್ಥ್ಯ ತಂಡದ ಆಟಗಾರರಲ್ಲಿದೆ. ಬೌಲಿಂಗ್‌ ವಿಭಾಗದಲ್ಲಿ ಯಾರಾದರೂ ಗಾಯಗೊಂಡರೆ ಅವರ ಸ್ಥಾನಕ್ಕೆ ಬದಲಿ ಅವಕಾಶಗಳಿವೆ" ಎಂದು ರವಿಶಾಸ್ತ್ರಿ ತಿಳಿಸಿದರು. 
ಆಲ್‌ರೌಂಡರ್‌ ಕೇದಾರ್‌ ಜಾದವ್‌ ಐಪಿಎಲ್‌ ವೇಳೆ ಗಾಯಗೊಂಡಿದ್ದರು. ಜತೆಗೆ, ಚೈನಾಮನ್‌ ಕುಲ್ದೀಪ್‌ ಯಾದವ್‌ ಅವರು ಲಯ ಕಳೆದುಕೊಂಡಿರುವ ಬಗ್ಗೆ ಮಾತನಾಡಿದ ಅವರು, ಈ ಕುರಿತು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ" ಎಂದರು. 
"ನಾವು ಈಗಾಗಲೇ ಐಪಿಎಲ್‌ ನಿಂದ ಹೊರ ಬಂದಿದ್ದೇವೆ. ಇದೇ 22 ರಂದು ಇಂಗ್ಲೆಂಡ್‌ಗೆ 15 ಆಟಗಾರರೂ ಪ್ರಯಾಣ ಬೆಳೆಸಲಿದ್ದಾರೆ. ಕೇದಾರ್ ಜಾದವ್‌ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಇನ್ನೂ ಸಮಯವಿದೆ. ಹಾಗಾಗಿ, ಅವರ ಬಗ್ಗೆ ಕಾದು ನೋಡಬೇಕಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com