3ನೇ ಟೆಸ್ಟ್: ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ದ.ಆಫ್ರಿಕಾ, ಸಂಕಷ್ಟದಲ್ಲಿ ಡುಪ್ಲೆಸಿಸ್ ಬಳಗ

ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 130 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ.
ಪದಾರ್ಪಣೆ ಪಂದ್ಯದಲ್ಲೇ ವಿಕೆಟ್ ಕಬಳಿಸಿದ ನದೀಮ್ ಸಂಭ್ರಮ
ಪದಾರ್ಪಣೆ ಪಂದ್ಯದಲ್ಲೇ ವಿಕೆಟ್ ಕಬಳಿಸಿದ ನದೀಮ್ ಸಂಭ್ರಮ

ರಾಂಚಿ: ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 130 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ.

ರಾಂಚಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ಕೇವಲ 130 ರನ್ ಗಳಿಗೆ  ವಿಕೆಟ್ ಕಳೆದುಕೊಂಡಿದೆ. ಆಫ್ರಿಕಾ ಪರ ಹಮ್ಜಾ (62 ರನ್) ಮತ್ತು ಭವುಮಾ (32 ರನ್) ಕೊಂಚ ಪ್ರತಿರೋಧ ಒಡ್ಡಿದರಾದರೂ, ಭಾರತೀಯ ಬೌಲರ್ ಗಳ ಸಾಂಘಿಕ ಪ್ರದರ್ಶನಕ್ಕೆ ತತ್ತರಿಸಿ ವಿಕೆಟ್ ಕೈ ಚೆಲ್ಲಿದರು. ಆರಂಭದಿಂದಲೂ ನಿಗದಿತವಾಗಿ ವಿಕೆಟ್ ಕೈ ಚೆಲ್ಲುತ್ತಾ ಸಾಗಿದ್ದ ಆಫ್ರಿಕಾ ತಂಡಕ್ಕೆ ವೇಗಿಗಳಾದ ಮಹಮದ್ ಶಮಿ, ಉಮೇಶ್ ಯಾದವ್ ಆಘಾತ ನೀಡಿದರೆ, ಹಮ್ಜಾ ವಿಕೆಟ್ ಪಡೆಯುವ ಮೂಲಕ ರವೀಂದ್ರ ಆಫ್ರಿಕಾಗೆ ಮರ್ಮಾಘಾತ ನೀಡಿದರು.

ಇತ್ತೀಚಿನ ವರದಿಗಳು ಬಂದಾಗ ಆಫ್ರಿಕಾ ತಂಡ 131 ರನ್ ಗಳಿಸಿದ್ದು, 8 ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ಶೆಬಾಜ್ ನದೀಮ್ ಪದಾರ್ಪಣೆ ಪಂದ್ಯದಲ್ಲೇ ಮೊದಲ ವಿಕೆಟ್ ಗಳಿಸಿದ್ದು, ಆಫ್ರಿಕಾ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ಬವುಮಾರನ್ನು ಪೆವಿಲಿಯನ್ ಗೆ ಅಟ್ಟಿದ್ದಾರೆ. ಇನ್ನುಳಿದಂತೆ ಮಹಮದ್ ಶಮಿ, ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಗಳಿಸಿದ್ದಾರೆ.

16 ರನ್ ಗಳಿಸಿರುವ ಲಿಂಡೆ ಮತ್ತು ಖಾತೆ ತೆರೆಯದ ನಾರ್ಟ್ಜೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com