ರೋಹಿತ್ ದ್ವಿಶತಕ, ರಹಾನೆ ಶತಕ: ಭಾರತ 497 ರನ್ ಗಳಿಗೆ ಡಿಕ್ಲೇರ್, ಸಂಕಷ್ಟದಲ್ಲಿ ದಕ್ಷಿಣ ಆಫ್ರಿಕಾ

ಹಿಟಮನ್ ರೋಹಿತ್ ಶರ್ಮಾ (212 ರನ್ ) ಚೊಚ್ಚಲ ದ್ವಿಶತಕ ಹಾಗೂ ಅಜಿಂಕ್ಯಾ ರಹಾನೆ (115 ರನ್) ವೃತ್ತಿ ಜೀವನದ 11ನೇ ಶತಕದ ಬಲದಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಮೊತ್ತ ಮೊತ್ತ ಕಲೆ ಹಾಕಿದೆ.
ಭಾರತ ತಂಡ
ಭಾರತ ತಂಡ

ರಾಂಚಿ: ಹಿಟಮನ್ ರೋಹಿತ್ ಶರ್ಮಾ (212 ರನ್ ) ಚೊಚ್ಚಲ ದ್ವಿಶತಕ ಹಾಗೂ ಅಜಿಂಕ್ಯಾ ರಹಾನೆ (115 ರನ್) ವೃತ್ತಿ ಜೀವನದ 11ನೇ ಶತಕದ ಬಲದಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಮೊತ್ತ ಮೊತ್ತ ಕಲೆ ಹಾಕಿದೆ.

ಇಲ್ಲಿನ ಜೆಎಸ್‍ಸಿಎ ಕ್ರೀಡಾಂಗಣದಲ್ಲಿ ಮೂರು ವಿಕೆಟ್ ಕಳೆದುಕೊಂಡು 224 ರನ್‍ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಟೀಮ್ ಇಂಡಿಯಾ ಟೀ ವಿರಾಮದ ವೇಳೆಗೆ 116.3 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 497 ರನ್ ದಾಖಲಿಸಿತ್ತು.

ಇಂದು ಬೆಳಗ್ಗೆ ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಜೋಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿತು. ಶನಿವಾರ ತೋರಿದ ಪ್ರದರ್ಶನವನ್ನೇ ಇಂದೂ ಮುಂದುವರಿಸಿತು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‍ಗೆ 267 ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿತು. 

 ಬಳಿಕ  ಮಂದ ಬೆಳಕಿನ ಕಾರಣದಿಂದಾಗಿ  ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಮಾಡಿಕೊಂಡರು. ಆಟ ಆರಂಭಿಸಿರುವ ದಕ್ಷಿಣ ಆಫ್ರಿಕಾ 8 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com