ಲಂಕಾ ಆಟಗಾರನ ಬ್ಲಂಡರ್ ರನೌಟ್ ಮಿಸ್, ವಿಡಿಯೋ ವೈರಲ್!

ಸುಲಭವಾಗಿ ರನ್ ಔಟ್ ಮಾಡುವ ಅವಕಾಶಗಳನ್ನು ಕೆಲವೊಮ್ಮೆ ಆಟಗಾರರು ಕಳೆದುಕೊಳ್ಳುತ್ತಾರೆ. ಅದೇ ರೀತಿ ಲಂಕಾ ಬೌಲರ್ ಒಬ್ಬ ಸ್ಮಿತ್ ರನ್ನು ಸುಲಭವಾಗಿ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Published: 30th October 2019 05:50 PM  |   Last Updated: 30th October 2019 06:04 PM   |  A+A-


Lakshan Sandakan

ಸಂದಕನ್

Posted By : Vishwanath S
Source : Online Desk

ಸುಲಭವಾಗಿ ರನ್ ಔಟ್ ಮಾಡುವ ಅವಕಾಶಗಳನ್ನು ಕೆಲವೊಮ್ಮೆ ಆಟಗಾರರು ಕಳೆದುಕೊಳ್ಳುತ್ತಾರೆ. ಅದೇ ರೀತಿ ಲಂಕಾ ಬೌಲರ್ ಒಬ್ಬ ಸ್ಮಿತ್ ರನ್ನು ಸುಲಭವಾಗಿ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಶ್ರೀಲಂಕಾ 9 ವಿಕೆಟ್ ಗಳಿಂದ ಸೋಲು ಕಂಡಿದೆ. ಇದೇ ಪಂದ್ಯದಲ್ಲಿ ಸ್ಪಿನ್ನರ್ ಲಕ್ಷನ್ ಸಂದಕನ್ ಅವರಿಗೆ ನಾನ್ ಸ್ಟ್ರೈಕ್ ನಲ್ಲಿದ್ದ ಸ್ಮಿತ್ ರನ್ನು ಸುಲಭವಾಗಿ ಔಟ್ ಮಾಡುವ ಅವಕಾಶವಿತ್ತು. 

ಸ್ಟ್ರೈಕ್ ನಲ್ಲಿದ್ದ ಡೇವಿಡ್ ವಾರ್ನರ್ ಸಂದಕನ್ ಎಸೆತವನ್ನು ನೇರವಾಗಿ ಹೊಡೆದರು. ಈ ವೇಳೆ ಚೆಂಡು ವಿಕೆಟ್ ಗೆ ಬೀಳುತ್ತದೆ. ಆದರೆ ಚೆಂಡು ಬೌಲರ್ ಕೈಗೆ ಚಟ್ ಆಗಿರುವುದಿಲ್ಲ. ಈ ವೇಳೆ ಸ್ಮಿತ್ ರನ್ ಕದಿಯುವ ಭರದಲ್ಲಿ ಮುಂದಕ್ಕೆ ಹೋಗಿದ್ದರು. 

ಆಗ ಸಂದಕನ್ ಚೆಂಡನ್ನು ವಿಕೆಟ್ ಗೆ ಬಡಿಯುವ ಬಡಲು ಬಲಗೈನಲ್ಲಿ ಚೆಂಡನ್ನು ಹಿಡಿದು ಎಡಗೈನಲ್ಲಿ ವಿಕೆಟ್ ಕಿತ್ತಿದ್ದರಿಂದ ನಾಟೌಟ್ ಆಗಲು ಕಾರಣವಾಯಿತು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp