ವಿಕೆಟ್ ಪಡೆದ ಸಂಭ್ರಮದಲ್ಲಿ ಶಮಿ ಮತ್ತು ತಂಡ
ವಿಕೆಟ್ ಪಡೆದ ಸಂಭ್ರಮದಲ್ಲಿ ಶಮಿ ಮತ್ತು ತಂಡ

2ನೇ ಟೆಸ್ಟ್: ಕೆರಿಬಿಯನ್ನರಿಗೆ ಬೃಹತ್ ಗುರಿ ನೀಡಿದ ಭಾರತ, ವಿಂಡೀಸ್ ಗೆ ಮತ್ತೆ ಆರಂಭಿಕ ಆಘಾತ

ಅತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತ ಬೃಹತ್ ಗುರಿ ನೀಡಿದ್ದು,  2ನೇ ಟೆಸ್ಟ್ ನಲ್ಲೂ ವಿಂಡೀಸ್ ತಂಡಕ್ಕೆ ಸೋಲಿನ ಭೀತಿ ಶುರುವಾಗಿದೆ.

ಜಮೈಕಾ: ಅತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಭಾರತ ಬೃಹತ್ ಗುರಿ ನೀಡಿದ್ದು,  2ನೇ ಟೆಸ್ಟ್ ನಲ್ಲೂ ವಿಂಡೀಸ್ ತಂಡಕ್ಕೆ ಸೋಲಿನ ಭೀತಿ ಶುರುವಾಗಿದೆ.

ವಿಂಡೀಸ್ ತಂಡವನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ  117 ರನ್ ಗಳಿಗೆ ನಿಯಂತ್ರಿಸಿದ್ದ ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ  168 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ 2ನೇ ಟೆಸ್ಟ್ ನಲ್ಲಿ ವಿಂಡೀಸ್ ತಂಡಕ್ಕೆ ಗೆಲ್ಲಲು 468 ರನ್ ಗಳ ಬೃಹತ್ ಗುರಿ ನೀಡಿದೆ. ಭಾರತದ ಪರ ಅಜಿಂಕ್ಯಾ ರಹಾನೆ ಅಜೇಯ 64 ರನ್ ಗಳಿಸಿದರೆ, ಹನುಮವಿಹಾರಿ ಕೂಡ ಅಜೇಯ 53 ರನ್ ಗಳಿಸಿ ಭಾರತ ಬೃಹತ್ ಗುರಿಗೆ ನೆರವಾದರು.

ಇನ್ನು ಭಾರತ ನೀಡಿದ ಈ ಮೊತ್ತವನ್ನು ಬೆನ್ನು ಹತ್ತಿರುವ ವೆಸ್ಟ್ ಇಂಡೀಸ್ ತಂಡ ಮತ್ತೆ ಆರಂಭಿಕ ಆಘಾತ ಅನುಭವಿಸಿದ್ದು, ಕೇವಲ 45 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ವಿಂಡೀಸ್ ತಂಡ 9 ರನ್ ಗಳಿಸಿದ್ದಾಗ ಇಶಾಂತ್ ಶರ್ಮಾ ಆರಂಭಿಕ ಆಘಾತ ನೀಡಿದರು. ಕೇವಲ 3 ರನ್ ಗಳಿಸಿದ್ದ ಕ್ರೇಗ್ ಬ್ರಾಥ್ ವೇಟ್ ರನ್ನು ಔಟ್ ಮಾಡಿ ಪೆವಿಲಿಯನ್ ಗೆ ಅಟ್ಟಿದರು. ಇವರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಕ್ಯಾಂಪ್ ಬೆಲ್ 16 ರನ್ ಗಳಿಸಿದ್ದಾಗ ಶಮಿ ಬೌಲಿಂಗ್ ನಲ್ಲಿ ಔಟ್ ಆದರು. 

ಮೂರನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ ತಂಡ 45 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಇನ್ನು 18ರನ್ ಗಳಿಸಿರುವ ಡರೇನ್ ಬ್ರಾವೋ ಮತ್ತು 4 ರನ್ ಗಳಿಸಿರುವ ಬ್ರೂಕ್ಸ್ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಹೀಗಾಗಿ 2ನೇ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಜಯದತ್ತ ದಾಪುಗಾಲಿರಿಸಿದೆ ಎನ್ನಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com