ನೀನು ಕೊರೊನಾ ವೈರಸ್‌ಗಿಂತಲೂ ಅಪಾಯಕಾರಿ: ಸರವಣ್ ವಿರುದ್ಧ ಕ್ರಿಸ್ ಗೇಲ್ ಟೀಕೆ

ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಮ್‌ನರೇಶ್ ಸರವಣ್‌ ವಿರುದ್ಧ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಹಿಗ್ಗಾಮಗ್ಗ ಜರಿದಿದ್ದಾರೆ.
ಕ್ರಿಸ್ ಗೇಯ್ಲ್-ಸರವಣ್
ಕ್ರಿಸ್ ಗೇಯ್ಲ್-ಸರವಣ್
Updated on: 

ಜಮೈಕಾ: ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಮ್‌ನರೇಶ್ ಸರವಣ್‌ ವಿರುದ್ಧ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಹಿಗ್ಗಾಮಗ್ಗ ಜರಿದಿದ್ದಾರೆ.

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫ್ರಾಂಚೈಸಿ ತಂಡವಾದ ಜಮೈಕಾ ತಲಾವಾಸ್‌ ತಂಡ ಟಿ20 ಕ್ರಿಕೆಟ್‌ನಲ್ಲಿ 22 ಶತಕಗಳನ್ನು ಬಾರಿಸಿರುವ ಸ್ವಘೋಷಿತ ಯೂನಿವರ್ಸ್‌ ಬಾಸ್‌ ಖ್ಯಾತಿಯ ಗೇಲ್‌ ಅವರನ್ನು ತಂಡದಿಂದ ಕೈಬಿಟ್ಟಿದೆ. ಇದಕ್ಕೆ ಸರವಣ್‌ ಮುಖ್ಯ ಕಾರಣ. ಅವರೇ ತಮ್ಮ ಮತ್ತು ಫ್ರಾಂಚೈಸಿ ವಿರುದ್ಧ ಭಿನ್ನಾಭಿಪ್ರಾಯ ತಂದಿದ್ದಾರೆ ಎಂದು ಗೇಲ್‌ ಆರೋಪಿಸಿದ್ದಾರೆ.

ಜಮೈಕಾ ತಲಾವಾಸ್‌ ಫ್ರಾಂಚೈಸಿ ತಂಡದ ಹಿಡಿತ ತೆಗೆದುಕೊಳ್ಳುವ ಸಲುವಾಗಿ ಪ್ರಯತ್ನಿಸುತ್ತಿರುವ ರಾಮ್‌ ನರೇಶ್‌ ಸರವಣ್, ತಮ್ಮನ್ನು ತಂಡದಿಂದ ಹೊರದಬ್ಬಲು ಸಂಚು ಮಾಡಿದ್ದಾರೆ ಎಂದು ಗೇಲ್‌ ಗುಡುಗಿದ್ದಾರೆ. "ಸರವಣ್‌, ಸದ್ಯಕ್ಕೆ ನೀನು ಕೊರೊನಾ ವೈರಸ್‌ಗಿಂತಲೂ ಅಪಾಯಕಾರಿ," ಎಂದು ಕ್ರಿಸ್‌ ಗೇಲ್‌ ತಮ್ಮ ಯೂಟ್ಯೂಬ್‌ ಚಾನಲ್‌ ಮೂಲಕ ಹರಿಹಾಯ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com