ಬಾಕ್ಸಿಂಗ್ ಡೇ ಟೆಸ್ಟ್: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ, ಅಶ್ವಿನ್, ಬುಮ್ರಾ ಮಾರಕ ಬೌಲಿಂಗ್

ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲೇ ಭಾರತದ ಜಸ್ ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ಆಘಾತ ನೀಡಿದ್ದಾರೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್ ಅಶ್ವಿನ್
ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್ ಅಶ್ವಿನ್

ಮೆಲ್ಬರ್ನ್: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲೇ ಭಾರತದ ಜಸ್ ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ಆಘಾತ ನೀಡಿದ್ದಾರೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇಂದು ಆರಂಭವಾಗಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸಿಸ್ ನಾಯರ ಆ್ಯರೋನ್ ಫಿಂಚ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಟೆಸ್ಟ್ ಪಂದ್ಯದ ಭರ್ಜರಿ ಜಯದ ಮೂಲಕ 2ನೇ ಟೆಸ್ಟ್ ಆಡುತ್ತಿರುವ ಆಸಿಸ್ ಬಳಗ ಈ ಪಂದ್ಯವನ್ನು ಗೆದ್ದು ಸರಣಿಯ ಮೇಲೆ ಬಿಗಿ  ಹಿಡಿತ ಸಾಧಿಸುವ ವಿಶ್ವಾಸದಲ್ಲಿದೆ. ಇತ್ತ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡದ ಸಾರಥ್ಯ ವಹಿಸಿದ್ದಾರೆ.

ಇನ್ನು ವಿಶ್ವಾಸದಿಂದಲೇ ಬ್ಯಾಟಿಂಗ್ ಗೆ ಇಳಿದ ಆಸಿಸ್ ತಂಡಕ್ಕೆ ಭಾರತದ ಜಸ್ ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಶೂನ್ಯಕ್ಕೆ ಜೋ ಬರ್ನ್ಸ್ ಅವರನ್ನು ಬೂಮ್ರಾ ಶೂನ್ಯಕ್ಕೆ  ಔಟ್‌ ಮಾಡುವ ಮೂಲಕ ಮೊದಲ ವಿಕೆಟ್‌ ಪಡೆದರು. ನಂತರ ದಾಳಿಗೆ ಇಳಿದ ಅಶ್ವಿನ್‌ ಚುರುಕಾಗಿ 2 ವಿಕೆಟ್‌ ಪಡೆದರು.  ಮ್ಯಾಥ್ಯೂ ವೇಡ್ ಹಾಗೂ ಸ್ಟೀವ್ ಸ್ಮಿತ್ ವಿಕೆಟ್‌ ಪಡೆದರು. ಮಿಂಚಿನ ಆಟವಾಡಿದ ವೇಡ್‌ 30 ರನ್‌ ಗಳಿಸಿ ಔಟಾದರು. ಸ್ಮಿತ್‌ ಅವರನ್ನು ಅಶ್ವಿನ್‌ ಶೂನ್ಯಕ್ಕೆ ಔಟ್‌ ಮಾಡಿದರು. ಬೋಜನ ವಿರಾಮದ ವೇಳೆಗೆ 3 ವಿಕೆಟ್‌ ಕಳೆದುಕೊಂಡು 65 ರನ್‌ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೆ ಬುಮ್ರಾ ಆಘಾತ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com