ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮತ್ತೊಂದು ಸಾಧನೆ ಮಾಡಿದ ಹಿಟ್ ಮ್ಯಾನ್ ರೋಹಿತ್ 

ನ್ಯೂಜಿಲೆಂಡ್ ವಿರುದ್ಧದ  ಐದನೇ ಮತ್ತು ಕೊನೆಯ ಟಿ-20 ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತೊಂದು ಸಾಧನೆ ಮಾಡಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ
Updated on

ಮೌಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ  ಐದನೇ ಮತ್ತು ಕೊನೆಯ ಟಿ-20 ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತೊಂದು ಸಾಧನೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ  14 ಸಾವಿರ ರನ್ ಪೂರೈಸಿದ ಎಂಟನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ  ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ 31 ರನ್ ಗಳಿಸುತ್ತಿದ್ದಂತೆ ಈ ಸಾಧನೆ ಮಾಡಿದರು.

ಈ  ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 14 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ  ಸಚಿನ್ ತೆಂಡೊಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಎಂಎಸ್ ಧೋನಿ, ವಿರೇಂದ್ರ ಸೆಹ್ವಾಗ್ ಹಾಗೂ ಮೊಹಮ್ಮದ್ ಅಜರುದ್ದೀನ್ ಅಂತಹ ದಿಗ್ಗಜ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು. 

ಮೊಹಮ್ಮದ್ ಅಜರುದ್ದೀನ್  (15, 593 )ಸೆಹ್ವಾಗ್  (17, 253)  ಗಂಗೂಲಿ ( 18,575) ಕೊಹ್ಲಿ ( 21, 777) ಡ್ರಾವಿಡ್ ( 24, 208) ತೆಂಡೊಲ್ಕರ್ ( 34, 357 ) ರನ್ ಗಳಿಸಿದ್ದು, ಇದೀಗ ರೋಹಿತ್ ಶರ್ಮಾ ಹೊಸದಾಗಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com