ಅಂಡರ್ 19 ವಿಶ್ವಕಪ್: ಸೆಮಿ ಫೈನಲ್ ನಲ್ಲಿ 'ಕಾಶ್ಮೀರ ಬನೇಗಾ ಪಾಕಿಸ್ತಾನ' ಘೋಷಣೆಯ ವಿಡಿಯೋ ವೈರಲ್ 

ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಅಭಿಮಾನಿಯೊಬ್ಬ 'ಕಾಶ್ಮೀರ ಬನೇಗಾ ಪಾಕಿಸ್ತಾನ' ಎಂಬ ಘೋಷಣೆ ಕೂಗುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾದ ಅಭಿಯಾನಿಯ ಘೋಷಣೆ
ದಕ್ಷಿಣ ಆಫ್ರಿಕಾದ ಅಭಿಯಾನಿಯ ಘೋಷಣೆ

ಪೊಷೆಫ್ ಸ್ಟ್ರೂಮ್:ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದ  ಟೀಮ್ ಇಂಡಿಯಾ 10 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಮತ್ತೊಮ್ಮೆ ಫೈನಲ್ ಗೆ ಪ್ರವೇಶ ಪಡೆದಿದೆ.

ಈ  ಪಂದ್ಯದ ವೇಳೆ  ದಕ್ಷಿಣ ಆಫ್ರಿಕಾದ ಅಭಿಮಾನಿಗಳು 'ಕಾಶ್ಮೀರ ಬನೇಗಾ ಪಾಕಿಸ್ತಾನ' ಎಂಬ ಘೋಷಣೆ ಕೂಗುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಸೆನ್ವೆಸ್ ಪಾರ್ಕ್ ಸ್ಯಾಂಡ್ ನಿಂದ ಕೇಳಿಬಂದ ಈ ಘೋಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚೆಚ್ಚು ಶೇರ್ ಆಗುತ್ತಿದ್ದಂತೆ  ಟ್ವಿಟರ್ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com