ಬಹೃತ್ ಗುರಿ ಮೆಟ್ಟಿ ನಿಂತ ಕಿವೀಸ್: ದಾಖಲೆ ಬರೆದ ನ್ಯೂಜಿಲೆಂಡ್

ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 348 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ಅತಿಥೇಯ ನ್ಯೂಜಿಲೆಂಡ್ ತಂಡ ನೂತನ ದಾಖಲೆ ನಿರ್ಮಿಸಿದೆ.
ಕಿವೀಸ್ ಪಡೆ ಬ್ಯಾಟಿಂಗ್
ಕಿವೀಸ್ ಪಡೆ ಬ್ಯಾಟಿಂಗ್

ಹ್ಯಾಮಿಲ್ಟನ್: ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 348 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ಅತಿಥೇಯ ನ್ಯೂಜಿಲೆಂಡ್ ತಂಡ ನೂತನ ದಾಖಲೆ ನಿರ್ಮಿಸಿದೆ.

ಹೌದು.. ಹ್ಯಾಮಿಲ್ಟನ್ ನಲ್ಲಿ ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 348 ರನ್ ಗಳ ಬೃಹತ್ ಗುರಿಯನ್ನು ಕೇವಲ 48.1 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು ಸಾಧಿಸಿದ ನ್ಯೂಜಿಲೆಂಡ್ ತಂಡ ದಾಖಲೆ ನಿರ್ಮಾಣ ಮಾಡಿದೆ.

ನ್ಯೂಜಿಲೆಂಡ್ ಪಾಲಿಗೆ ಇದು ಕ್ರಿಕೆಟ್ ಇತಿಹಾಸದ ಅತ್ಯಂತ ದೊಡ್ಡ ಗೆಲುವಾಗಿದ್ದು, ಅತ್ಯಂತ ದೊಡ್ಡ ಮೊತ್ತದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ. ಈ ಹಿಂದೆ 2007ರಲ್ಲಿ ಇದೇ ಹ್ಯಾಮಿಲ್ಟನ್ ಪಿಚ್ ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 347 ರನ್ ಗಳ ಗುರಿಯನ್ನು ನ್ಯೂಜಿಲೆಂಡ್ ಸಾಧಿಸಿತ್ತು. ಇದು ಈ ವರೆಗಿನ ಗರಿಷ್ಠ ಸಾಧನೆಯಾಗಿತ್ತು. ಆದರೆ ಇಂದು 348ರನ್ ಗಳ ಗುರಿಯನ್ನು ಮೆಟ್ಟಿ ನಿಂತು ಈ ದಾಖಲೆಯನ್ನು ಹಿಂದಿಕ್ಕಿದೆ.

ಇನ್ನು 2007ರಲ್ಲಿ ಆಕ್ಲೆಂಡ್ ನಲ್ಲಿ ಇದೇ ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ನೀಡಿದ್ದ 337 ರನ್ ಗಳ ಗುರಿಯನ್ನು ಸಾಧಿಸಿತ್ತು. ಇದಾದ ಬಳಿಕ 2018ರಲ್ಲಿ ಡುನೆಡಿನ್ ನಲ್ಲಿ ಇಂಗ್ಲೆಂಡ್ ನೀಡಿದ್ದ 336ರನ್ ಗಳ ಗುರಿಯನ್ನು ಸಾಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com