ಅನುಷ್ಕಾ ಶರ್ಮಾ ನನ್ನ ಜೀವನ ಸಂಗಾತಿಯಾಗಿರುವುದಕ್ಕೆ ಕೃತಜ್ಞ: ವಿರಾಟ್ ಕೊಹ್ಲಿ

ಅನುಷ್ಕಾ ಶರ್ಮಾ ನನ್ನ ಜೀವನ ಸಂಗಾತಿಯಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 
ಅನುಷ್ಕಾ ಶರ್ಮಾ ನನ್ನ ಜೀವನ ಸಂಗಾತಿಯಾಗಿರುವುದಕ್ಕೆ ಕೃತಜ್ಞ: ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ನನ್ನ ಜೀವನ ಸಂಗಾತಿಯಾಗಿರುವುದಕ್ಕೆ ಕೃತಜ್ಞ: ವಿರಾಟ್ ಕೊಹ್ಲಿ

ನವದೆಹಲಿ: ಅನುಷ್ಕಾ ಶರ್ಮಾ ನನ್ನ ಜೀವನ ಸಂಗಾತಿಯಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 

ಭಾರತ ಕ್ರಿಕೆಟ್ ತಂಡದ ಪ್ರಾರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರೊಂದಿಗೆ ಓಪನ್ ನೆಟ್ಸ್ ವಿತ್ ಮಯಾಂಕ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೊಹ್ಲಿ, ಕಠಿಣವಾಗಿದ್ದ ತನ್ನನ್ನು ಪ್ರಾಯೋಗಿಕ ವ್ಯಕ್ತಿಯನ್ನಾಗಿಸಿದ್ದರ ಶ್ರೇಯ ಅನುಷ್ಕಾ ಶರ್ಮಾ ಅವರಿಗೇ ಸಲ್ಲಬೇಕು ಎಂದು ಹೇಳಿದ್ದಾರೆ. 

ತನ್ನಲ್ಲಿ ಒಳ್ಳೆಯ ಬದಲಾವಣೆಗಳಾಗುವುದಕ್ಕೆ ಅನುಷ್ಕಾ ಶರ್ಮಾ ಕಾರಣ ಎಂದು ಕೊಹ್ಲಿ ಹೇಳಿದ್ದು ಅನುಷ್ಕಾ ಶರ್ಮಾ ಅವರನ್ನು ಜೀವನ ಸಂಗಾತಿಯಾಗಿ ಪಡೆಯುವುದಕ್ಕೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. 

ವಾಸ್ತಕ್ಕಿಂತ ಭಿನ್ನವಾಗಿ ಯೋಚಿಸುವವರು ನೀವಾಗಿದ್ದು ಅಥವಾ ತೀರ ಕಠಿಣ ಸ್ವಭಾವದವರಾಗಿದ್ದು ನಿಮ್ಮ ಸಂಗಾತಿಯ ದೃಷ್ಟಿಕೋನವೇ ಬೇರೆಯ ರೀತಿಯದ್ದಾಗಿದ್ದರೆ, ಆ ದೃಷ್ಟಿಕೋನದ ಬಗ್ಗೆಯೂ ಚಿಂತನೆ ನಡೆಸುವಂತಾಗುತ್ತದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com