

ನವದೆಹಲಿ: ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್‌ಗೆ ಅತಿ ಹೆಚ್ಚು ಸಂಭಾವನೆ ಸ್ವೀಕರಿಸುವ ಕ್ರೀಡಾಪಟುಗಳ ಟಾಪ್ 10 ಪಟ್ಟಿಯಲ್ಲಿ ಏಕೈಕ ಕ್ರಿಕೆಟಿಗನಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
ಪ್ರಚಾರದ ಉದ್ದೇಶವಾಗಿ ಇನ್‌ಸ್ಟ್ರಾಗ್ರಾಮ್ ಖಾತೆ ಮೂಲಕ ಕೊಹ್ಲಿ ಪೋಸ್ಟ್ ಮಾಡುವ ಒಂದು ಪೋಸ್ಟ್‌ಗೆ ಬರೋಬ್ಬರಿ 1.21 ಕೋಟಿ ರೂ. ಜೇಬಿಗಿಳಿಸುತ್ತಾರೆ. ಈ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಆದಾಯ ಗಳಿಸುತ್ತಿರುವ ಟಾಪ್ 10 ಕ್ರೀಡಾ ತಾರೆಯರ ಪೈಕಿ ಕೊಹ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ.
ಮಾರ್ಚ್ 12ರಿಂದ ಮೇ 14ರವರೆಗೆ ವಿರಾಟ್ ಒಟ್ಟು ಮೂರು ಪೋಸ್ಟ್‌ಗಳನ್ನು ಮಾಡಿದ್ದು ಬರೋಬ್ಬರಿ 3.65 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.