ಧೋನಿ ಅಭಿಮಾನಿ ಮನೆ
ಧೋನಿ ಅಭಿಮಾನಿ ಮನೆ

ಐಪಿಎಲ್ ಎಫೆಕ್ಟ್: ಸಂಪೂರ್ಣ ಮನೆ ಹಳದಿ ಮಯ, ಮನೆ ಮೇಲೆ ಧೋನಿ ಪೇಂಟಿಂಗ್ಸ್: ವೈರಲ್ ಆಯ್ತು ಸಿಎಸ್ ಕೆ ಅಭಿಮಾನಿಯ ಮನೆ

ಮೊದಲಿನಿಂದಲೂ ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕಿಚ್ಚು ಹುಟ್ಟಿಸಿತ್ತು. ಇದಕ್ಕೆ ಇಂಬು ನೀಡುವಂತೆ ಇಲ್ಲೋರ್ವ ಧೋನಿ ಅಭಿಮಾನಿ ತನ್ನ ಇಡೀ ಮನೆಗೆ ಹಳದಿ ಬಣ್ಣದ ಪೇಂಟ್ ಮಾಡಿಸಿ ಗೋಡೆ ಮೇಲೆ ಧೋನಿ ಭಾವಚಿತ್ರ ಬರೆಸುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾನೆ.

ಚೆನ್ನೈ: ಮೊದಲಿನಿಂದಲೂ ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕಿಚ್ಚು ಹುಟ್ಟಿಸಿತ್ತು. ಇದಕ್ಕೆ ಇಂಬು ನೀಡುವಂತೆ ಇಲ್ಲೋರ್ವ ಧೋನಿ ಅಭಿಮಾನಿ ತನ್ನ ಇಡೀ ಮನೆಗೆ ಹಳದಿ ಬಣ್ಣದ ಪೇಂಟ್ ಮಾಡಿಸಿ ಗೋಡೆ ಮೇಲೆ ಧೋನಿ ಭಾವಚಿತ್ರ ಬರೆಸುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾನೆ.

ತಮಿಳುನಾಡಿನ ಅರಂಗುರ್‌ನಲ್ಲಿ ಎಂಎಸ್ ಧೋನಿಯ ದೊಡ್ಡ ಅಭಿಮಾನಿಯೊಬ್ಬ ತಮ್ಮ ಮನೆಗೆ ಸಂಪೂರ್ಣವಾಗಿ ಹಳದಿ ಬಣ್ಣವನ್ನು ಹೊಡೆಯುವ ಮೂಲಕ ತಮ್ಮ ಆರಾಧ್ಯ ದೈವವನಿಗೆ ಗೌರವ ಸಲ್ಲಿಸಿದ್ದಾರೆ. ಸಿಎಸ್‌ಕೆ ಜೆರ್ಸಿ ಹಳದಿ ಬಣ್ಣವನ್ನೇ ಸಂಪೂರ್ಣವಾಗಿ ಮನೆಗೆ ಬಳಸಿಕೊಳ್ಳಲಾಗಿದೆ. ಮನೆಗೆ 'ಹೋಮ್‌  ಆಫ್‌ ಧೋನಿ ಫ್ಯಾನ್‌'(ಧೋನಿಯ ಅಭಿಮಾನಿ ಮನೆ) ಎಂದು ನಾಮಕರಣ ಮಾಡಲಾಗಿದೆ.

ಆಂಗ್ಲ ಪತ್ರಿಕೆಯ ವರದಿಯ ಪ್ರಕಾರ, 'ಧೋನಿ ಅಭಿಮಾನಿ ತಮ್ಮ ಮನೆಗೆ ಸಿಎಸ್‌ಕೆ ಬಣ್ಣ ಹೊಡೆಯಲು ಸುಮಾರು 1.5 ಲಕ್ಷ ರೂಗಳನ್ನು ಖರ್ಚು ಮಾಡಿದ್ದಾರೆ. ಗೋಪಿ ಕೃಷ್ಣನ್‌ ಮೂಲತಃ ತಮಿಳುನಾಡಿನವರಾಗಿದ್ದು, ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂಎಸ್‌ ಧೋನಿ ಆಟವನ್ನು ನೇರವಾಗಿ ವೀಕ್ಷಿಸಲು  ಸಾಧ್ಯವಾಗದೇ ಇರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿದ್ದರೂ ತಂಡಕ್ಕೆ ಬೆಂಬಲ ಸೂಚಿಸುವುದನ್ನು ಮಾತ್ರ ಅವರು ನಿಲ್ಲಿಸಿಲ್ಲ.

ಎಂಎಸ್‌ ಧೋನಿಯ ಆಟವನ್ನು ನೇರವಾಗಿ ನೋಡಲು ಸಾಧ್ಯವಾಗದಕ್ಕೆ ಹಾಗೂ ಪ್ರಸಕ್ತ ಆವೃತ್ತಿಯಲ್ಲಿ ಧೋನಿ ಕಳಪೆ ಆಟದ ಬಗ್ಗೆ ಸಾಕಷ್ಟು ಜನ ಟೀಕಿಸುತ್ತಿದ್ದಾರೆ, ಈ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. ನಾನು ಅವರಿಗೆ ಪ್ರೇರಣೆ ತುಂಬಬೇಕು, ಪಂದ್ಯದಲ್ಲಿ ಸೋಲಲಿ ಅಥವಾ ಗೆಲ್ಲಲಿ ನಾವು ಯಾವಾಗಲೂ  ಸಹಕಾರ ನೀಡುತ್ತೇವೆ," ಎಂದು ಗೋಪಿ ಕೃಷ್ಣನ್‌ ಹೇಳಿದ್ದಾರೆ.

ತಮಿಳುನಾಡಿನ ಕುಡ್ಡಾಲೂರ್‌ನ ಗೋಪಿ ಕೃಷ್ಣ ಎಂಬ ವ್ಯಕ್ತಿಯ ಮನೆ ಇದಾಗಿದ್ದು, ಚೆನ್ನೈ ಸೂಪರ್‌ ಕಿಂಗ್ಸ್ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಧೋನಿಗೆ ಗೌರವ ಸಲ್ಲಿಸಿರುವ ಹಳದಿ ಬಣ್ಣದ ಮನೆಯ ಫೋಟೊವನ್ನು ಶೇರ್ ಮಾಡಿದೆ. "ತಮಿಳುನಾಡಿನ ಅರಂಗುರ್‌ನ ಗೋಪಿ ಕೃಷ್ಣನ್‌ ಹಾಗೂ ಅವರ  ಕುಟುಂಬ ಸೂಪರ್ ಫ್ಯಾನ್‌, ತಮ್ಮ ಮನೆಯನ್ನು ಧೋನಿ ಅಭಿಮಾನಿ ಮನೆ ಎಂದು ಕರೆದಿದ್ದಾರೆ. ಹಳದಿ ಬಣ್ಣದಿಂದ ಹೃದಯವನ್ನು ತುಂಬುವ ಸೂಪರ್ ಡೂಪರ್‌ ಗೌರವವಿದು," ಎಂದು ಸಿಎಸ್‌ಕೆ ಟ್ವೀಟ್‌ ಮಾಡಿ ಈ ಶೀರ್ಷಿಕೆಯನ್ನು ನೀಡಿದೆ.

Related Stories

No stories found.

Advertisement

X
Kannada Prabha
www.kannadaprabha.com