ಗೆಲುವಿನ ಲಯವನ್ನು ಮುಂದುವರೆಸುತ್ತೇವೆ: ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಗೆದ್ದ ನಂತರ, ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಂಡದ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ತಂಡವು ಈ ಲಯವನ್ನು ಮುಂದುವರೆಸುವುದಾಗಿ ಆಶಿಸಿದ್ದಾರೆ.

Published: 02nd December 2020 08:22 PM  |   Last Updated: 02nd December 2020 08:22 PM   |  A+A-


Team India

ಟೀಂ ಇಂಡಿಯಾ

Posted By : Vishwanath S
Source : UNI

ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಗೆದ್ದ ನಂತರ, ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಂಡದ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ತಂಡವು ಈ ಲಯವನ್ನು ಮುಂದುವರೆಸುವುದಾಗಿ ಆಶಿಸಿದ್ದಾರೆ.

ಭಾರತ ತಂಡವು ಸರಣಿಯನ್ನು 1-2ರಿಂದ ಸೋತಿತು. ತಂಡವು ಕೊನೆಯ ಏಕದಿನ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. "ಆಸ್ಟ್ರೇಲಿಯಾದ ಬ್ಯಾಟಿಂಗ್ ಸಮಯದಲ್ಲಿ ನಾವು ಒತ್ತಡದಲ್ಲಿದ್ದೇವೆ. ಶುಭ್ ಮನ್ ಮತ್ತು ಇತರ ಹೊಸ ಆಟಗಾರರ ಆಗಮನವು ಅಂತಿಮ ಪಂದ್ಯಕ್ಕೆ ಸ್ವಲ್ಪ ತಾಜಾತನ ನೀಡಿತು. ಬೌಲರ್‌ಗಳಿಗೆ ಪಿಚ್ ಸಹಾಯಕವಾಗಿತ್ತು” ಎಂದಿದ್ದಾರೆ.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಕೊಹ್ಲಿ, ನಮ್ಮ ತಂಡದ ಆಟಗಾರರು ಉತ್ತಮವಾಗಿ ಕಮ್ ಬ್ಯಾಕ್ ಮಾಡಿದ್ದಾರೆ. ಆಸ್ಟ್ರೇಲಿಯಾ ನಮ್ಮನ್ನು ಒತ್ತಡಕ್ಕೆ ತಳ್ಳಿದ್ದು ನಿಜ. ಆದರೆ ಕಳೆದ 13 ರಿಂದ 14 ವರ್ಷಗಳಿಂದ ಆಡುತ್ತಿರುವ ನಮಗೆ ಈ ರೀತಿ ಕಮ್ ಬ್ಯಾಕ್ ಮಾಡಲು ಸಮರ್ಥರಾಗಿದ್ದೇವೆ. ನಾನು ಇನ್ನು ಸ್ವಲ್ಪ ಹೊತ್ತು ಆಡಬೇಕಾಗಿತ್ತು. ಆದರೆ ಹಾರ್ದಿಕ್ ಹಾಗೂ ರವಿಂದ್ರ ಜಡೇಜಾ ಅವರ ಅದ್ಭುತ ಜತೆಯಾಟ ಉತ್ತಮ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇಂತಹ ಪ್ರದರ್ಶನ ತಂಡಕ್ಕೆ ಅಗತ್ಯವಿದೆ ಎಂದು ಹೇಳಿದರು. 

ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್ ಗಳಿಂದ ಗೆಲುವು ಸಾಧಿಸಿತ್ತು.

Stay up to date on all the latest ಕ್ರಿಕೆಟ್ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp