ಕಿವೀಸ್ ವಿರುದ್ಧ 'ಕ್ಲೀನ್ ಸ್ವೀಪ್ '  ಕೊಹ್ಲಿ, ಟೇಲರ್  ಹೇಳಿದಿಷ್ಟು!

ಐದನೇ ಮತ್ತು ಕೊನೆಯ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ನ್ನು ಐದು ರನ್ ಗಳಿಂದ ಸೋಲಿಸಿದ ನಂತರ ತಂಡದ ಸಾಧನೆ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ, ರಾಸ್ ಟೇಲರ್
ವಿರಾಟ್ ಕೊಹ್ಲಿ, ರಾಸ್ ಟೇಲರ್

ಮೌಟ್ ಮಾಂಗನುಯಿ: ಐದನೇ ಮತ್ತು ಕೊನೆಯ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ನ್ನು ಐದು ರನ್ ಗಳಿಂದ ಸೋಲಿಸಿದ ನಂತರ ತಂಡದ ಸಾಧನೆ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಈ ಪಂದ್ಯದಲ್ಲಿನ ಪ್ರತಿಯೊಂದು ಕ್ಷಣವೂ ಚಾರಿತ್ರಿಕ, ಸಂತೋಷದಾಯಕ ಹಾಗೂ ಹೆಮ್ಮೆಯನ್ನುಂಟುಮಾಡಿದೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ ಟೀಮ್ ಇಂಡಿಯಾದ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ವೈಟ್ ವಾಶ್ ಸೋಲು ಕಂಡಿದ್ದು ಬೇಸರ ತಂದಿದೆ ಎಂದು ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ರಾಸ್ ಟೇಲರ್ ಅಭಿಪ್ರಾಯ ಪಟ್ಟಿದ್ದಾರೆ

ಸರಣಿ ಬೇಸರ ತಂದಿದೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ತಂಡ ವಿಫಲವಾಗಿದೆ. ವಿಶ್ವದ ಸ್ಟಾರ್ ತಂಡದ ವಿರುದ್ಧ ಆಡುವಾಗ ಎಡವಿದ್ದೇವೆ. ತಂತ್ರವನ್ನು ಅರಿತು ಆಡುವಲ್ಲಿ ತಂಡ ಹಿಂದೆ ಬಿದ್ದಿದೆ. ಟಿ-20 ಸರಣಿಯಲ್ಲಿ ಈ ರೀತಿ ಪ್ರದರ್ಶನ ನೀಡಿದ್ದು ನಿರಾಸೆ ತಂದಿದೆ. ಏಕದಿನ ಸರಣಿಯ ವೇಳೆ ಕೇನ್ ವಿಲಿಯಮ್ಸನ್ ಅವರ ಭುಜದ ನೋವು ಗುಣಮುಖವಾಗಬಹುದು” ಎಂದಿದ್ದಾರೆ.

ಟೀಮ್ ಇಂಡಿಯಾ ನಮ್ಮ ನ್ಯೂನತೆ ಅರಿತು ಆಟವಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಲ್ಲಿ ಗೆಲುವು ಸಾಧಿಸ ಬಹುದಿತ್ತು. ಟೀಮ್ ಇಂಡಿಯಾ ವಿದೇಶಿ ನೆಲದಲ್ಲೂ ಸರಣಿ ಗೆಲ್ಲುವ ಕ್ಷಮತೆ ಹೊಂದಿದೆ” ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com