2ನೇ ಏಕದಿನ: ವಿರಾಟ್ ಕೊಹ್ಲಿ ಹಿಂದಿಕ್ಕಿದ ರಾಸ್ ಟೇಲರ್

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆಯ ರಾಸ್ ಟೇಲರ್ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.
ರಾಸ್ ಟೇಲರ್ ಮತ್ತು ವಿರಾಟ್ ಕೊಹ್ಲಿ
ರಾಸ್ ಟೇಲರ್ ಮತ್ತು ವಿರಾಟ್ ಕೊಹ್ಲಿ

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆಯ ರಾಸ್ ಟೇಲರ್ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.

ಹೌದು.. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಇಷ್ಟು ದಿನ 2ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರನ್ನು ರಾಸ್ ಟೇಲರ್ ಹಿಂದಿಕ್ಕಿದ್ದಾರೆ. ಇಂದು ನಡೆಯುತ್ತಿರುವ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿರುವ ರಾಸ್ ಟೇಲರ್ 74 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಗಳ ಮೂಲಕ ಅಜೇಯ 73 ರನ್ ಸಿಡಿಸಿದ್ದಾರೆ.

ಆ ಮೂಲಕ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ಟೇಲರ್ ಒಟ್ಟು 1373 ರನ್ ಗಳಿಸಿ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. 1354 ರನ್ ಗಳಿಸಿರುವ ವಿರಾಟ್ ಕೊಹ್ಲಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಪಟ್ಟಿಯಲ್ಲಿ 1750 ರನ್ ಗಳಿಸಿರುವ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದು, 1207 ರನ್ ಗಳಿಸಿರು ನಾಥನ್ ಆ್ಯಸ್ಚಲ್ ನಾಲ್ಕು ಮತ್ತು 1157 ರನ್ ಗಳಿಸಿರುವ ವಿರೇಂದ್ರ ಸೆಹ್ವಾಗ್ 5ನೇ ಸ್ಥಾನದಲ್ಲಿದ್ದಾರೆ. 

ಇನ್ನು ಪಟ್ಟಿಯಲ್ಲಿ ಕೇವಲ 19 ರನ್ ಗಳ ಅಂತರದಲ್ಲಿ ಕೊಹ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಬ್ಯಾಟಿಂಗ್ ಇದೀಗ ಆರಂಭವಾಗಿದೆ. ಹೀಗಾಗಿ ಕೊಹ್ಲಿ 19 ರನ್ ಪೇರಿಸಿ ಮತ್ತೆ 2ನೇ ಸ್ಥಾನಕ್ಕೇರುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com