ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ದ್ವಿಶತಕಕ್ಕೆ ದಶಕದ ಸಂಭ್ರಮ

ಭಾರತದ ಸವ್ಯಸಾಚಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ದ್ವಿಶತಕ ದಾಖಲಾಗಿ ಇಂದಿಗೆ ಸರಿಯಾಗಿ 10 ವರ್ಷ...
ಸಚಿನ್ ತೆಂಡೂಲ್ಕರ್ ದ್ವಿಶತಕ
ಸಚಿನ್ ತೆಂಡೂಲ್ಕರ್ ದ್ವಿಶತಕ

ನವದೆಹಲಿ: ಭಾರತದ ಸವ್ಯಸಾಚಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ದ್ವಿಶತಕ ದಾಖಲಾಗಿ ಇಂದಿಗೆ ಸರಿಯಾಗಿ 10 ವರ್ಷ...

ಹೌದು.. ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ ಏಕದಿನ ಕ್ರಿಕೆಟ್ ಲೋಕ ಹಿಂದೆಂದೂ ಕಾಣದ ಅಭೂತ ಅಪೂರ್ವ ದಾಖಲೆಗೆ ಸಾಕ್ಷಿಯಾಗಿತ್ತು. ಏಕದಿನ ಇತಿಹಾಸದಲ್ಲಿ ಹಿಂದೆಂದೂ ಸಾಧ್ಯವಾಗದ ದಾಖಲೆಯೊಂದನ್ನು ಟೀಮ್ ಇಂಡಿಯಾ ಪರವಾಗಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮಾಡಿದ್ದರು. ಐವತ್ತು ಓವರ್‌ಗಳ ಸೀಮಿತ ಅವಧಿಯಲ್ಲಿ ದ್ವಿಶತಕವನ್ನು ಬಾರಿಸಬಹುದು ಎಂದು ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ತೋರಿಸಿಕೊಟ್ಟಿದ್ದರು. ಸಚಿನ್ ತೆಂಡೂಲ್ಕರ್ ಅವರ ಈ ಅಪೂರ್ವ ಸಾಧನೆಗೆ ಇಂದಿಗೆ ಸರಿಯಾಗಿ ಹತ್ತು ವರ್ಷಗಳು ಸಂದಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆಯನ್ನು ಮಾಡಿದ್ದರು. ಫೆಬ್ರವರಿ 24, 2010ರಂದು ಗ್ವಾಲಿಯರ್ ಮೈದಾನ ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ನಡುವಿನ ಏಕದಿನ ಸರಣಿಗೆ ಸಾಕ್ಷಿಯಾಗಿತ್ತು. ಇದೇ ಪಂದ್ಯದಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಏಕದಿನ ಇತಿಹಾಸದ ಪ್ರಪ್ರಥಮ ದ್ವಿಶತಕವನ್ನು ಸಿಡಿಸಿದ್ದರು. ಅಂದಿನ ಪಂದ್ಯದಲ್ಲಿ ಕೇವಲ 147 ಎಸೆತಗಳನ್ನು ಎದುರಿಸಿದ್ದ ಸಚಿನ್ ತೆಂಡೂಲ್ಕರ್ ಅವರು, ಭರ್ಜರಿ 25 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ  ಅಜೇಯ 200 ರನ್ ಸಿಡಿಸಿದ್ದರು.

ಇದು ಕ್ರಿಕೆಟ್ ಜಗತ್ತಿನ ಮೊಟ್ಟ ಮೊದಲ ಏಕದಿನ ದ್ವಿಶತಕವಾಗಿ ದಾಖಲಾಗಿದೆ. ಇನ್ನು ಈ ಮಹತ್ತರ ಸಾಧನೆಯನ್ನು ಬಿಸಿಸಿಐ ನೆನಪಿಸಿಕೊಂಡಿದ್ದು, ಈ ಪಂದ್ಯ ಅಮೂಲ್ಯ ಕ್ಷಣಗಳ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com