ಮಹಿಳಾ ಟಿ20 ವಿಶ್ವಕಪ್ ವಿಶ್ವಕಪ್ ಫೈನಲ್: ಇಂಡೋ-ಆಸಿಸ್ ಆಟಗಾರ್ತಿಯರಿಗೆ ಪ್ರಧಾನಿ ಮೋದಿ, ಆಸಿಸ್ ಪ್ರಧಾನಿ ಸ್ಕಾಟ್ ಮೊರಿಸನ್ ಶುಭ ಹಾರೈಕೆ

ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಚ್ರೇಲಿಯಾ ಮಹಿಳಾ ತಂಡಗಳು ಟಿ20 ವಿಶ್ವಕಪ್ ವಿಶ್ವಕಪ್ ಫೈನಲ್ ಪಂದ್ಯ ಆಡುತ್ತಿದ್ದು, ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸಿಸ್ ಪ್ರಧಾನಿ ಸ್ಟಾಟ್ ಮೊರಿಸನ್ ಉಭಯ ತಂಡಗಳಿಗೆ ಶುಭಕೋರಿದ್ದಾರೆ.
ಪ್ರಧಾನಿ ಮೋದಿ ಹಾಗೂ ಆಸಿಸ್ ಪ್ರಧಾನಿ ಸ್ಕಾಟ್ ಮೊರಿಸ್
ಪ್ರಧಾನಿ ಮೋದಿ ಹಾಗೂ ಆಸಿಸ್ ಪ್ರಧಾನಿ ಸ್ಕಾಟ್ ಮೊರಿಸ್

ನವದೆಹಲಿ: ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಆಸ್ಚ್ರೇಲಿಯಾ ಮಹಿಳಾ ತಂಡಗಳು ಟಿ20 ವಿಶ್ವಕಪ್ ವಿಶ್ವಕಪ್ ಫೈನಲ್ ಪಂದ್ಯ ಆಡುತ್ತಿದ್ದು, ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸಿಸ್ ಪ್ರಧಾನಿ ಸ್ಟಾಟ್ ಮೊರಿಸನ್ ಉಭಯ ತಂಡಗಳಿಗೆ ಶುಭಕೋರಿದ್ದಾರೆ.

ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಎದುರು ನೋಡುತ್ತಿರುವ ಭಾರತೀಯ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ನಾಯಕಿ ಮಿಥಾಲಿ ರಾಜ್ ಸೇರಿದಂತೆ ಪ್ರಮುಖರು ಶುಭಾಶಯ ಕೋರಿದ್ದು, ಅತ್ತ
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಟ್ವಿಟರ್ ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಫೈನಲ್ ಪಂದ್ಯದ ಕುರಿತು ಶುಭ ಕೋರಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮೊರಿಸನ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಬಿಗ್ ಫೈನಲ್ ಬಗ್ಗೆ ಉಲ್ಲೇಖಿಸಿದ್ದಾರೆ. ಕ್ರಿಕೆಟ್ ಲೋಕದ 2 ದೊಡ್ಡ ಶ್ರೇಷ್ಠ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿದ್ದು, ಇಂದು ರಾತ್ರಿ ಅತೀ ದೊಡ್ಡ ಮತ್ತು ಕುತೂಹಲಕಾರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಆಸಿಸ್ ತಂಡವೇ ಪಂದ್ಯ ಗೆಲ್ಲಲಿದೆ ಎಂದು ಭಾರತ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಇದಕ್ಕೆ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಭಾರತ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕಿಂತ ಮತ್ತೊಂದು ದೊಡ್ಡ ಪಂದ್ಯವಿಲ್ಲ. ಉಭಯ ತಂಡದ ಆಟಗಾರ್ತಿಯರಿಗೂ ಮಹಿಳಾ ದಿನಾಚರಣೆ ನಿಮಿತ್ತ ನನ್ನ ಶುಭಕಾಮನೆಗಳು. ಅತ್ಯುತ್ತಮ ತಂಡವೇ ನಾಳೆ ಗೆಲುವು ಸಾಧಿಸಲಿದ್ದು, ಎಂಸಿಜಿ ಕೂಡ ಭಾರತೀಯ ಪ್ರೇಕ್ಷಕರಿಂದ ಬ್ಲೂ ಮೌಂಟೇನ್ ಆಗಿರಲಿದೆ. ಹಾಗೆಯೇ ನೀಲಿ ಸಾಗರವೇ ಹರಿದು ಬರಲಿದೆ ಎಂದು ಆಸಿಸ್ ಪ್ರಧಾನಿಯ ಕಾಲೆಳೆದಿದ್ದಾರೆ.

ಇತ್ತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಗೆಲುವಿಗಾಗಿ ಶುಭ ಹಾರೈಸಿದ್ದು, ಹಾಗೆಯೇ ಮಹಿಳೆಯರ ಸಾಧನೆಯಿಂದ ಇಡೀ ದೇಶವೇ ಹೆಮ್ಮೆಪಟ್ಟುಕೊಳ್ಳುವಂತಾಗಿದೆ ಎಂದಿದ್ದಾರೆ. ಅಂತೆಯೇ ಭಾರತ ಮಹಿಳಾ ಕ್ರಿಕೆಟ್ ಮಾಜಿ ನಾಯಕಿ ಮಿಥಾಲಿ ರಾಜ್ ಕೂಡ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಶೇಷ ವಿಡಿಯೋ ಅಪ್ಲೋಡ್ ಮಾಡಿ ಭಾರತೀಯ ವನಿತೆಯರಿಗೆ ಶುಭಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com