ಐಪಿಎಲ್‌ ಆಡಲು ಮನ ತುಡಿಯುವುದಕ್ಕೆ ಅನೇಕ ಕಾರಣಗಳಿವೆ: ಪ್ಯಾಟ್ ಕಮಿನ್ಸ್‌

ವಿಶ್ವ ಶ್ರೇಷ್ಠ ಆಟಗಾರರನ್ನು ಒಗ್ಗೂಡಿಸಿ ಅಭಿಮಾನಿಗಳಿಗೆ ಟಿ20 ಕ್ರಿಕೆಟ್‌ನ ರಸದೌತಣ ಉಣಬಡಿಸುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ ಆಗಿ ಬೆಳೆದು ನಿಂತಿದೆ.

Published: 21st May 2020 05:19 PM  |   Last Updated: 21st May 2020 05:19 PM   |  A+A-


Pat Cummins

ಪ್ಯಾಟ್ ಕಮಿನ್ಸ್

Posted By : Vishwanath S
Source : UNI

ನವದೆಹಲಿ: ವಿಶ್ವ ಶ್ರೇಷ್ಠ ಆಟಗಾರರನ್ನು ಒಗ್ಗೂಡಿಸಿ ಅಭಿಮಾನಿಗಳಿಗೆ ಟಿ20 ಕ್ರಿಕೆಟ್‌ನ ರಸದೌತಣ ಉಣಬಡಿಸುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ ಆಗಿ ಬೆಳೆದು ನಿಂತಿದೆ.

ಐಪಿಎಲ್‌ನಲ್ಲಿ ಆಡಿದರೆ ಆಟಗಾರರ ಭವಿಷ್ಯವೇ ಬದಲಾಗಿಬಿಡುತ್ತದೆ ಎಂಬ ಸ್ಥಿತಿ ಈಗ ನಿರ್ಮಾಣವಾಗಿದೆ. ಕೇವಲ ಭಾರತೀಯ ಆಟಗಾರರಿಗೆ ಮಾತ್ರವಲ್ಲ ವಿದೇಶಿ ಕ್ರಿಕೆಟಿಗರು ಕೂಡ ಐಪಿಎಲ್‌ ವೇದಿಕೆಯನ್ನು ಸದ್ಬಳಕೆ ಮಾಡಿ ತಮ್ಮ ತಮ್ಮ ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆದುಕೊಂಡ ಹಲವು ಉದಾಹರಣೆಗಳಿವೆ.

ಇನ್ನು ಹಣದ ವಿಚಾರದಲ್ಲಿ ಟೂರ್ನಿಯು ಕ್ರಿಕೆಟಿಗರಿಗೆ, ಫ್ರಾಂಚೈಸಿಗೆ ಮತ್ತು ಟೂರ್ನಿ ಸಂಘಟಿಸುವ ಬಿಸಿಸಿಐಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಆದರೆ, ಈ ಬಾರಿ ಟೂರ್ನಿ ನಡೆಯುವುದು ಅತಂತ್ರ ಸ್ಥಿತಿಯಲ್ಲಿದ್ದು, ಕೊರೊನಾ ವೈರಸ್‌ ಭೀತಿ ಹಿನ್ನಲೆಯಲ್ಲಿ ಮಾರ್ಚ್‌ 29ಕ್ಕೆ ಶುರುವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಅನಿರ್ದಿಷ್ಟ ಅವಧಿಯ ಕಾಲ ರದ್ದು ಪಡಿಸಲಾಗಿದೆ.

ಲಾಕ್‌ಡೌನ್‌ 4.0 ಬಳಿಕ ದೇಶದಲ್ಲಿ ಕ್ರೀಡಾಂಗಣಗಳನ್ನು ತೆರೆಯಲು ಸರಕಾರ ಅನುಮತಿಸಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ಮತ್ತು ನವೆಂಬರ್‌ ಅವಧಿಯಲ್ಲಿ ಐಪಿಎಲ್‌ ಆಯೋಜಿಸುವ ಬಗ್ಗೆ ಬಿಸಿಸಿಐ ಕಾರ್ಯೋನ್ಮುಖವಾಗಿದೆ. ಇದೇ ವೇಳೆ ಐಪಿಎಲ್‌ನಲ್ಲಿ ಆಡಲು ಕಾತುರದಿಂದ ಎದುರು ನೋಡುತ್ತಿರುವುದಾಗಿ ಆಸ್ಟ್ರೇಲಿಯಾ ತಂಡದ ವೇಗಿ ಪ್ಯಾಟ್‌ ಕಮಿನ್ಸ್‌ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಕಮಿನ್ಸ್‌ ದಾಖಲೆಯ 15.5 ಕೋಟಿ ರೂ. ಬೆಲೆಗೆ ಕೋಲ್ಕೊತಾ ನೈಟ್‌ ರೈಡರ್ಸ್ ತಂಡದ ಪಾಲಾಗಿದ್ದರು. ಇದರೊಂದಿಗೆ ಈ ಬಾರಿಯ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದರು. 

"ಟೂರ್ನಿ ಬಗ್ಗೆ ನಾನು ಕೆಕೆಆರ್‌ ಮಾಲೀಕರು ಮತ್ತು ಸಿಬ್ಬಂದಿ ಜೊತೆಗೆ ಮಾತನಾಡಿದಾಗಲೆಲ್ಲಾ ಅವರು ಈ ವರ್ಷ ಟೂರ್ನಿ ನಡೆದೇ ನಡೆಯುತ್ತದೆ ಎಂಬ ವಿಶ್ವಾಸ ನೀಡಿದ್ದಾರೆ. ನಾನು ಕೂಡ ಹಲವು ಕಾರಣಗಳಿಂದ ಟೂರ್ನಿ ಆಡುವುದನ್ನು ಎದುರು ನೋಡುತ್ತಿದ್ದೇನೆ. ಟೂರ್ನಿ ನಡೆಯುತ್ತದೆ ಎಂಬ ಆಶಾಭಾವ ನನ್ನಲ್ಲಿದೆ," ಎಂದು ಕಮಿನ್ಸ್‌ ಹೇಳಿಕೊಂಡಿದ್ದಾರೆ.

"ಕೊರೊನಾ ವೈರಸ್‌ನಿಂದ ಸ್ಥಗಿತಗೊಂಡಿರುವ ಕ್ರಿಕೆಟ್‌ಗೆ ಮರಳಿ ಜೀವ ನೀಡಲು ಐಪಿಎಲ್‌ ಬಹುದೊಡ್ಡ ವೇದಿಕೆ ಆಗಲಿದೆ. ಟಿ20 ಕ್ರಿಕೆಟ್‌ ಆದ್ದರಿಂದ ಹೆಚ್ಚು ದಣಿವಾಗುವುದಿಲ್ಲ. ಇದರ ಬಳಿಕ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆಡಲು ಸಾಧ್ಯವಾಗುತ್ತದೆ. ಹೀಗಾಗಿ ಇದಕ್ಕೂ ಮೊದಲು ವಿಶ್ವ ದರ್ಜೆಯ ಟಿ20 ಟೂರ್ನಿ ಆಡುವುದರಿಂದ ಲಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ," ಎಂದು ಕಮಿನ್ಸ್‌ ವಿವರಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp