ಪ್ರೇಕ್ಷಕರಿಗೆ ಅವಕಾಶ ಬೆನ್ನಲ್ಲೇ ಭಾರತ-ಆಸೀಸ್ ನಡುವಿನ 3 ಟಿ20, 2 ಏಕದಿನ ಪಂದ್ಯಗಳ ಟಿಕೆಟ್ ಸೋಲ್ಡ್ ಔಟ್!

ಕೊರೋನಾ ಮಹಾಮಾರಿ ಹಾವಳಿಯ ನಡುವೆಯೂ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಸರಣಿಗಳು ನಡೆಯಲಿದ್ದು ಮೊದಲ ದಿನವೇ ಮೂರು ಟಿ20 ಹಾಗೂ ಎರಡು ಏಕದಿನ ಪಂದ್ಯಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಆರೋನ್ ಪಿಂಚ್-ವಿರಾಟ್ ಕೊಹ್ಲಿ
ಆರೋನ್ ಪಿಂಚ್-ವಿರಾಟ್ ಕೊಹ್ಲಿ

ಮೆಲ್ಬೋರ್ನ್: ಕೊರೋನಾ ಮಹಾಮಾರಿ ಹಾವಳಿಯ ನಡುವೆಯೂ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಸರಣಿಗಳು ನಡೆಯಲಿದ್ದು ಮೊದಲ ದಿನವೇ ಮೂರು ಟಿ20 ಹಾಗೂ ಎರಡು ಏಕದಿನ ಪಂದ್ಯಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. 

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಟಿ20 ಮತ್ತು ಎರಡು ಏಕದಿನ ಪಂದ್ಯಗಳ ಟಿಕೆಟ್ ಮಾರಾಟವಾಗಿವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ತಿಳಿಸಿದೆ. ಎಸ್‌ಸಿಜಿ ಮತ್ತು ಮನುಕಾ ಓವಲ್‌ನಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳ ಟಿಕೆಟ್ ಮತ್ತು ಮನುಕಾ ಓವಲ್ ನಲ್ಲಿ ನಡೆಯಲಿರುವ ಟಿ20 ಮತ್ತು ಎಸ್‌ಸಿಜಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡು ಟಿ20 ಪಂದ್ಯಗಳ ಟಿಕೆಟ್ ಮಾರಾಟವಾಗಿವೆ ಎಂದು ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ನವೆಂಬರ್ 27ರಂದು ಎಸ್‌ಸಿಜಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಕೆಲ ಟಿಕೆಟ್‌ಗಳು ಮಾತ್ರ ಉಳಿದಿವೆ. ಅಂದಾಜು 1,900 ಸೀಟ್ ಗಳು ಉಳಿದಿವೆ. ಎಸ್‌ಸಿಜಿ ಮತ್ತು ಮನುಕಾ ಓವಲ್ ಎರಡೂ ಸರಣಿಯ ಶೇಕಡಾ 50ರಷ್ಟು ಸಾಮರ್ಥ್ಯವನ್ನು ಹೊಂದಿರುತ್ತವೆ. 

ಪುರುಷರ ಅಂತಾರಾಷ್ಟ್ರೀಯ ಟೂರ್ನಿ ಪ್ರಾರಂಭವಾಗುವವರೆಗೆ ಅಭಿಮಾನಿಗಳು ಕಾಯಲು ಸಾಧ್ಯವಿಲ್ಲ ಎಂದು ಇದು ತೋರಿಸಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಫ್ಯಾನ್ ಎಂಗೇಜ್‌ಮೆಂಟ್‌ನ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಆಂಥೋನಿ ಎವೆರಾರ್ಡ್ ಹೇಳಿದ್ದಾರೆ. "ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ಕ್ರಿಕೆಟ್ ತಂಡಗಳ ನಡುವಿನ ಪೈಪೋಟಿ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಶ್ರೇಷ್ಠವಾದದ್ದು, ಈ ಸರಣಿ ಮಹಾಕಾವ್ಯವಾಗಿ ರೂಪಿಸಿಕೊಳ್ಳುವುದು ಎಂದು ಎವೆರಾರ್ಡ್ ಹೇಳಿದರು.

ಏಕದಿನ ಮತ್ತು ಟಿ20 ಸರಣಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಕಾಣುವುದು ಅದ್ಭುತವಾಗಿದೆ. ನಿನ್ನೆಯಿಂದ ಆಸ್ಟ್ರೇಲಿಯಾದ ಕ್ರಿಕೆಟ್ ಟಿಕೆಟ್ ಮಾರಾಟ ಆರಂಭಿಸಿದ್ದು ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಇದೇ ವೇಳೆ ನವೆಂಬರ್ 27ರಂದು ಎಸ್‌ಸಿಜಿಯಲ್ಲಿ ಮೊದಲ ಏಕದಿನ ಪಂದ್ಯದ ಕೇವಲ ಒಂದೆರಡು ಸಾವಿರ ಟಿಕೆಟ್‌ಗಳು ಬಾಕಿ ಉಳಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com