ಟಿ-20: ಸಾಂಪ್ರದಾಯಿಕ ಎದುರಾಳಿ ಆಸಿಸ್ ವಿರುದ್ಧ ಇಂಗ್ಲೆಂಡ್ ಗೆ ಎರಡು ರನ್ ರೋಚಕ ಜಯ

ಕೊನೆಯ ಗಳಿಗೆಯಲ್ಲಿ ಬಿಗುವಿನ ಬೌಲಿಂಗ್ ದಾಳಿ ಮೂಲಕ ಆಸಿಸ್ ದಾಂಡಿಗರನ್ನು ಕಟ್ಟಿಹಾಕಿದ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಟಿ20 ಟೂರ್ನಿಯಲ್ಲಿ ರೋಚಕ ಜಯ ಸಾಧಿಸಿದೆ.
ಗೆಲುವಿನ ಸಂಭ್ರಮದಲ್ಲಿ ಇಂಗ್ಲೆಂಡ್‌
ಗೆಲುವಿನ ಸಂಭ್ರಮದಲ್ಲಿ ಇಂಗ್ಲೆಂಡ್‌

ಸೌಥ್ಯಾಂಪ್ಟನ್: ಕೊನೆಯ ಗಳಿಗೆಯಲ್ಲಿ ಬಿಗುವಿನ ಬೌಲಿಂಗ್ ದಾಳಿ ಮೂಲಕ ಆಸಿಸ್ ದಾಂಡಿಗರನ್ನು ಕಟ್ಟಿಹಾಕಿದ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಟಿ20 ಟೂರ್ನಿಯಲ್ಲಿ ರೋಚಕ ಜಯ ಸಾಧಿಸಿದೆ.

ಇಂಗ್ಲೆಂಡ್ ನ ಸೌಥ್ಯಾಂಪ್ಟನ್ ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಆಂಗ್ಲ ಪಡೆ 2 ರನ್ ಗಳ ರೋಚಕ ಜಯ ಸಾಧಿಸಿದೆ.  ಇಂಗ್ಲೆಂಡ್ ನೀಡಿದ 163 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಸಿಸ್ ದಾಂಡಿಗರು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ದಾಖಲಿಸಿದೆ.

ಕೊನೆಯ ಓವರ್ ಗಳಲ್ಲಿ ಬಿಗುವಿನ ದಾಳಿ ನಡೆಸಿದ ಬೌಲರ್ ಗಳ ನೆರವಿನಿಂದ ಆತಿಥೆಯ ಇಂಗ್ಲೆಂಡ್ ಮೊದಲ ಟಿ-20 ಪಂದ್ಯದಲ್ಲಿ ಎರಡು ರನ್ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು.

ಡೇವಿಡ್ ಮಲನ್ (66 ರನ್) ಮತ್ತು ಜಾಸ್ ಬಟ್ಲರ್ (44 ರನ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇಯಾನ್ ಮಾರ್ಗನ್ ಬಳಗ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 162 ರನ್ ಕಲೆ ಹಾಕಿತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಸ್ಟೇಲಿಯಾ ತಂಡ  ಡೇವಿಡ್ ವಾರ್ನರ್ ಭರ್ಜರಿ ಅರ್ಧಶತಕದ ಹೊರತಾಗಿಯೂ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 160ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಕೇವಲ 2 ರನ್ ಗಳ ಅಂತರದಲ್ಲಿ ಇಂಗ್ಲೆಂಡ್ ಎದುರು ಮಂಡಿಯೂರಿತು.

ಇಂಗ್ಲೆಂಡ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಡೇವಿಡ್ ಮಲನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.-----

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com