ಈ ಬಾರಿ ಐಪಿಎಲ್‌ ಟೂರ್ನಿಗೆ ಮಾಧ್ಯಮಗಳ ಪ್ರವೇಶ ರದ್ದು ಮಾಡಿದ ಬಿಸಿಸಿಐ!

ಕೋವಿಡ್‌-19 ಸೋಂಕಿನಿಂದಾಗಿ ಆಟಗಾರರ ಹಾಗೂ ಸಹಾಯಕ ಸಿಬ್ಬಂದಿಯ ಹಿತದೃಷ್ಠಿಯಿಂದ ಯುಎಇಯಲ್ಲಿ ನಡೆಯುತ್ತಿರುವ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಮಾಧ್ಯಮಗಳ ದೈಹಿಕ ಉಪಸ್ಥಿತಿಯನ್ನು ನಿಷೇಧಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ಕೋವಿಡ್‌-19 ಸೋಂಕಿನಿಂದಾಗಿ ಆಟಗಾರರ ಹಾಗೂ ಸಹಾಯಕ ಸಿಬ್ಬಂದಿಯ ಹಿತದೃಷ್ಠಿಯಿಂದ ಯುಎಇಯಲ್ಲಿ ನಡೆಯುತ್ತಿರುವ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಮಾಧ್ಯಮಗಳ ದೈಹಿಕ ಉಪಸ್ಥಿತಿಯನ್ನು ನಿಷೇಧಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ.

ಇದೇ ಮೊದಲ ಬಾರಿ ಪಂದ್ಯ ಪೂರ್ವ ಸುದ್ದಿ ಗೋಷ್ಠಿಯನ್ನು ಆಯೋಜಿಸುವುದನ್ನು ಕೈ ಬಿಡಲಾಗಿದೆ. ಆದರೆ ಪ್ರತಿಯೊಂದು ಪಂದ್ಯದ ಬಳಿಕ ಸುದ್ದಿಗೋಷ್ಠಿ ನಡೆಸುವುದು ಕಡ್ಡಾಯವಾಗಿದೆ.

"ಕೊರೊನಾ ವೈರಸ್‌ನಿಂದಾಗಿ ಡ್ರೀಮ್‌ ಇಲೆವೆನ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಈ ಬಾರಿ ಯುನೈಟೆಡ್‌ ಅರಬ್‌ ಎಮಿರೈಟ್ಸ್‌ನಲ್ಲಿ ಮುಚ್ಚಿದ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ. ಕೋವಿಡ್‌-19 ಸೋಂಕಿನಿಂದ ಆಟಗಾರರ ಹಾಗೂ ಸಹಾಯಕ ಸಿಬ್ಬಂದಿಯ ಆರೋಗ್ಯದ ಹಿತದೃಷ್ಠಿಯಿಂದ ಪಂದ್ಯಗಳು ಹಾಗೂ ಅಭ್ಯಾಸವನ್ನು ವರದಿ ಮಾಡಲು ಮಾಧ್ಯಗಳ ವರದಿಗಾರರ ದೈಹಿಕ ಉಪಸ್ಥಿತಿಯ ಅವಕಾಶವನ್ನು ನಿರಾಕರಿಸಲಾಗಿದೆ," ಎಂದು ಬಿಸಿಸಿಐ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com