'ನಾವೆಲ್ಲ ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು'; ಪಡಿಕ್ಕಲ್ ಕನ್ನಡ ಪ್ರೇಮ: ವಿಡಿಯೋ ವೈರಲ್

ಬೆಂಗಳೂರು ರಾಯಲ್ ಚಾಲೆಂಜರ್ಸ್ ಆರಂಭಿಕ ಬ್ಯಾಟ್ಸ್ ಮನ್ , ಕನ್ನಡಿಗ ದೇವದತ್ತ ಪಡಿಕ್ಕಲ್ ಅವರ ಕನ್ನಡಾಭಿಮಾನ ಕುರಿತ ವಿಡಿಯೋವೊಂದನ್ನು ಆರ್ ಸಿಬಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ.
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್
Updated on: 

ಬೆಂಗಳೂರು: ಬೆಂಗಳೂರು ರಾಯಲ್ ಚಾಲೆಂಜರ್ಸ್ ಆರಂಭಿಕ ಬ್ಯಾಟ್ಸ್ ಮನ್ , ಕನ್ನಡಿಗ ದೇವದತ್ತ ಪಡಿಕ್ಕಲ್ ಅವರ ಕನ್ನಡಾಭಿಮಾನ ಕುರಿತ ವಿಡಿಯೋವೊಂದನ್ನು ಆರ್ ಸಿಬಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ.

ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತನಾಡೋದು, ಗೌತಮ್ ಇರಲಿ ರಾಹುಲ್ ಸರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ ಎಂದು ಪಡಿಕ್ಕಲ್ ನೀಡಿರುವ ಹೇಳಿಕೆಯ ವಿಡಿಯೋ ಇದಾಗಿದೆ.

ಇನ್ನು ಈ ವಿಡಿಯೋದಲ್ಲಿ ತನ್ನ ವೃತ್ತಿ ಬದುಕು, ಕುಟುಂಬದ ಸಹಕಾರ ಸೇರಿದಂತೆ ಮತ್ತೊಂದಿಷ್ಟು ವಿಚಾರಗಳನ್ನು ಕನ್ನಡದಲ್ಲಿಯೇ ಹೇಳಿದ್ದಾರೆ. ತನ್ನ ವೃತ್ತಿ ಬದುಕಿಗೆ ಬೆಂಬಲಿಸಲೆಂದೇ ತನ್ನ ಕುಟುಂಬ ಹೈದರಾಬಾದಿನಿಂದ ಬೆಂಗಳೂರಿಗೆ ಸ್ಥಳಾಂತರವಾಗಿರುವುದಾಗಿ  ಪಡಿಕ್ಕಲ್ ತಿಳಿಸಿದ್ದಾರೆ.

ಆಟಗಾರನ ಪಾಲಿಗೆ ಬ್ಯಾಟ್ ಭಾವನಾತ್ಮಕ ನಂಟು ಹೊಂದಿದೆ. ಹಾಗಾಗಿ ನನ್ನ ಕ್ರಿಕೆಟ್ ಜೀವನದಲ್ಲಿ ಬಳಕೆ ಮಾಡಿದ ಬ್ಯಾಟ್ ಗಳನ್ನು ಸಂಗ್ರಹಿಸಿಡುವುದು ನನ್ನ ಪಾಲಿಗೆ ವಿಶೇಷ. ತಾನು ಎದುರಿಸಿದ ಬೌಲರ್ ಗಳ ಪೈಕಿ ಜಸ್ ಪ್ರೀತ್ ಬೂಮ್ರಾ ದಾಳಿ ಎದುರಿಸುವುದು ಅತ್ಯಂತ ಸವಾಲಿನಿಂದ ಕೂಡಿತ್ತು. ತಂಡಕ್ಕೆ ಸಾಧ್ಯವಾದಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡುವುದು ನನ್ನ ಮುಂದಿರುವ ಗುರಿ ಎಂಬುದಾಗಿ ಪಡಿಕ್ಕಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com