ಟಿ20 ವಿಶ್ವಕಪ್: ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಗೆ ಭರ್ಜರಿ ಜಯ, ಭಾರತದ ಸೆಮೀಸ್ ಕನಸು ಮತ್ತಷ್ಟು ಕಠಿಣ
ಟಿ20 ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತದ ಸೆಮೀಸ್ ಕನಸನ್ನು ಮತ್ತಷ್ಟು ಕಠಿಣಗೊಳಿಸಿದೆ.
Published: 05th November 2021 08:01 PM | Last Updated: 05th November 2021 08:02 PM | A+A A-

ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಗೆ ಜಯ
ಶಾರ್ಜಾ: ಟಿ20 ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತದ ಸೆಮೀಸ್ ಕನಸನ್ನು ಮತ್ತಷ್ಟು ಕಠಿಣಗೊಳಿಸಿದೆ.
ಇಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನಮೀಬಿಯಾ ವಿರುದ್ಧ 52 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನಮೀಬಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 111ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ನ್ಯೂಜಿಲೆಂಡ್ ವಿರುದ್ಧ 52 ರನ್ ಗಳ ಹೀನಾಯ ಸೋಲು ಕಂಡಿತು.
ಇದನ್ನೂ ಓದಿ: ಟಿ-20 ವಿಶ್ವಕಪ್; ಭಾರತದ ಪಾಲಿಗೆ ಸೆಮಿಫೈನಲ್ ಬಾಗಿಲು ಇನ್ನೂ ತೆಗೆದಿದೆಯೇ?, ಮುಂದಿನ ಸವಾಲುಗಳೇನು?
ಈ ಭರ್ಜರಿ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ ಅಂಕಗಳಿಕೆಯನ್ನು 6ಕ್ಕೇರಿಸಿಕೊಂಡಿದ್ದು, ಅಲ್ಲದೆ ತನ್ನ ನೆಟ್ ರನ್ ರೇಟ್ ಅನ್ನು ಮತ್ತಷ್ಟು ಉತ್ತಮಗೊಳಿಸಿಕೊಂಡಿದೆ. ಪ್ರಸ್ತುತ ನ್ಯೂಜಿಲೆಂಡ್ +1.277 ನೆಟ್ ರನ್ ರೇಟ್ ನೊಂದಿಗೆ ಆಫ್ಘಾನಿಸ್ತಾನವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದಿದೆ. ಆಡಿರುವ 4 ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿರುವ ಆಫ್ಘಾನಿಸ್ತಾನ ತಂಡ 4 ಅಂಕಗಳೊಂದಿಗೆ +1.481 ರನ್ ರೇಟ್ ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಆಡಿರುವ ಮೂರು ಪಂದ್ಯಗಳ ಪೈಕಿ 1ರಲ್ಲಿ ಗೆದ್ದು 2 ಅಂಕ ಹೊಂದಿರುವ ಭಾರತ ತಂಡ +0.073 ನೆಟ್ ರನ್ ರೇಟ್ ನೊಂದಿಗೆ 4ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: T20 World Cup: ಸೆಮಿಫೈನಲ್ ಗೆ ಹೋಗಲು ಕೊಹ್ಲಿ ಮುಂದೆ 2 ಸವಾಲು; ಪವಾಡ ನಡೆಯಬೇಕು!
ಭಾರತ ತಂಡ ಸೆಮೀಸ್ ಹಂತಕ್ಕೆ ಹೋಗಬೇಕು ಎಂದರೆ ತನ್ನ ಭರ್ಜರಿ ಪ್ರದರ್ಶನ ಮಾತ್ರವಲ್ಲ ನ್ಯೂಜಿಲೆಂಡ್ ತಂಡ ಸೊಲಿಗೂ ಎದುರು ನೋಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಇದೇ ಭಾನುವಾರ ಅಂದರೆ ನವೆಂಬರ್ ರಂದು ನಡೆಯಲಿರುವ ಆಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲಲೇಬೇಕು.. ಮತ್ತು ಭಾರತ ಉಳಿದ ಎಲ್ಲ ಪಂದ್ಯಗಳಲ್ಲಿ ಭರ್ಜರಿಯಾಗಿ ಉತ್ತಮ ನೆಟ್ ರನ್ ರೇಟ್ ನೊಂದಿಗೆ ಗೆಲ್ಲಲೇಬೇಕಿದೆ. ಆಗ ಮಾತ್ರ ಭಾರತದ ಸೆಮೀಸ್ ಕನಸು ನನಸಾಗಲಿದೆ.