8ನೇ ಬಾರಿಗೆ 100ಕ್ಕಿಂತ ಕಡಿಮೆ ರನ್ ಗೆ ಆಲೌಟ್; ಟಿ20 ವಿಶ್ವಕಪ್ ಇತಿಹಾಸದಲ್ಲಿ 2ನೇ ನಿದರ್ಶನ
ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದ್ದು, ಈ ದಾಖಲೆಗಳ ಪಟ್ಟಿಗೆ ಇಂದು ನಡೆದ ಭಾರತ ವರ್ಸಸ್ ಸ್ಕಾಟ್ಲೆಂಡ್ ನಡುವಿನ ಪಂದ್ಯ ಕೂಡ ಸೇರಿದೆ.
Published: 06th November 2021 12:23 AM | Last Updated: 06th November 2021 01:42 PM | A+A A-

ಸ್ಟಾಟ್ಲೆಂಡ್ ತಂಡ
ದುಬೈ: ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದ್ದು, ಈ ದಾಖಲೆಗಳ ಪಟ್ಟಿಗೆ ಇಂದು ನಡೆದ ಭಾರತ ವರ್ಸಸ್ ಸ್ಕಾಟ್ಲೆಂಡ್ ನಡುವಿನ ಪಂದ್ಯ ಕೂಡ ಸೇರಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: 85 ರನ್ ಗಳಿಗೆ ಆಲೌಟ್, ಭಾರತದ ವಿರುದ್ಧ ಹೀನಾಯ ದಾಖಲೆ ಬರೆದ ಸ್ಕಾಟ್ಲೆಂಡ್
ಹೌದು.. ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ 17.4 ಓವರ್ ನಲ್ಲಿ ಕೇವಲ 85ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಹಾಲಿ ಟೂರ್ನಿಯಲ್ಲಿ ತಂಡವೊಂದು 100ಕ್ಕಿಂತ ಕಡಿಮೆ ರನ್ ಗೆ ಆಲೌಟ್ ಆದ 8ನೇ ನಿದರ್ಶನ ಇದಾಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: 'ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್', ಜಸ್ ಪ್ರೀತ್ ಬುಮ್ರಾ ಹಿರಿಮೆಗೆ ಮತ್ತೊಂದು ಗರಿ
ಈ ಹಿಂದೆ ಶ್ರೀಲಂಕಾ ವಿರುದ್ಧ ನಮೀಬಿಯಾ ತಂಡ 96ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಬಾಂಗ್ಲಾದೇಶ ವಿರುದ್ಧ ಪಪುವಾ ನ್ಯೂಗಿನಿಯಾ ತಂಡ 97ರನ್ ಗಳಿಗೆ ಆಲೌಟ್ ಆಗಿತ್ತು. ಅಂತೆಯೇ ಶ್ರೀಲಂಕಾ ವಿರುದ್ಧ ನೆದರ್ಲೆಂಡ್ ಕೇವಲ 44 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 55ರನ್ ಗಳಿಗೆ ಆಲೌಟ್ ಆಗಿತ್ತು. ಆಫ್ಘಾನಿಸ್ತಾನದ ವಿರುದ್ಧ ಇದೇ ಸ್ಕಾಟ್ಲೆಂಡ್ 60ರನ್ ಗಳಿಗೆ ಆಲೌಟ್ ಆಗಿತ್ತು.
ಇದನ್ನೂ ಓದಿ: ಟಿ20 ವಿಶ್ವಕಪ್: 18 ಎಸೆತಗಳಲ್ಲೇ 50 ರನ್, ದಾಖಲೆ ನಿರ್ಮಿಸಿದ ಕೆಎಲ್ ರಾಹುಲ್!
ಒಟ್ಟಾರೆ ಹಾಲಿ ಟೂರ್ನಿಯಲ್ಲಿ 8 ಬಾರಿ ತಂಡಗಳು 100ಕ್ಕಿಂತ ಕಡಿಮೆ ರನ್ ಗೆ ಆಲೌಟ್ ಆಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಪವರ್ ಪ್ಲೇ ನಲ್ಲಿ ಗರಿಷ್ಠ ರನ್, ಟಿ20 ಕ್ರಿಕೆಟ್, ಟಿ20 ವಿಶ್ವಕಪ್ ನಲ್ಲಿ ದಾಖಲೆ ಬರೆದ ಭಾರತ
ಇಂತಹುದೇ ಘಟನೆ ಈ ಹಿಂದೆ 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲೂ ನಡೆದಿತ್ತು. ಆ ಟೂರ್ನಿಯಲ್ಲೂ ಕೂಡ 8 ಬಾರಿ ತಂಡಗಳು 100ಕ್ಕಿಂತ ಕಡಿಮೆ ರನ್ ಗೆ ಆಲೌಟ್ ಆಗಿದ್ದವು.
ಇದನ್ನೂ ಓದಿ: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಅತೀ ದೊಡ್ಡ ಗೆಲುವು!