ಟಿ20 ವಿಶ್ವಕಪ್: 'ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್', ಜಸ್ ಪ್ರೀತ್ ಬುಮ್ರಾ ಹಿರಿಮೆಗೆ ಮತ್ತೊಂದು ಗರಿ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಬೌಲಿಂದ್ ಪ್ರದರ್ಶಿಸಿದ ಭಾರತದ ಜಸ್ ಪ್ರೀತ್ ಬುಮ್ರಾ ದಾಖಲೆಯೊಂದನ್ನು ಬರೆದಿದ್ದಾರೆ.
ಜಸ್ ಪ್ರೀತ್ ಬುಮ್ರಾ
ಜಸ್ ಪ್ರೀತ್ ಬುಮ್ರಾ

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಬೌಲಿಂದ್ ಪ್ರದರ್ಶಿಸಿದ ಭಾರತದ ಜಸ್ ಪ್ರೀತ್ ಬುಮ್ರಾ ದಾಖಲೆಯೊಂದನ್ನು ಬರೆದಿದ್ದಾರೆ.

ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 2 ವಿಕೆಟ್ ಪಡೆದ ಬುಮ್ರಾ ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 64ಕ್ಕೆ ಏರಿಕೆ ಮಾಡಿಕೊಂಡರು.

ಆ ಮೂಲಕ ಜಸ್ ಪ್ರೀತ್ ಬುಮ್ರಾ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.  ಬುಮ್ರಾ 53 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇದಕ್ಕೂ ಮೊದಲು ಈ ಸಾಧನೆ ಭಾರತ ಮತ್ತೋರ್ವ ಸ್ಚಾರ್ ಬೌಲರ್ ಯಜುವೇಂದ್ರ ಚಹಲ್ ಅವರ ಹೆಸರಿನಲ್ಲಿತ್ತು. ಚಹಲ್ 49 ಪಂದ್ಯಗಳಲ್ಲಿ 63 ವಿಕೆಟ್ ಗಳಿಸಿ ಅತೀ ಹೆಚ್ಚು ವಿಕೆಟ್ ಗಳಿಸಿದ ಭಾರತದ ಬೌಲರ್ ಎನಿಸಿಕೊಂಡಿದ್ದರು. ಇದೀಗ ಈ ಸಾಧನೆಯನ್ನು ಬುಮ್ರಾ ಹಿಂದಿಕ್ಕಿದ್ದಾರೆ.

27 ವರ್ಷ ವಯಸ್ಸಿನ ಬುಮ್ರಾ 2016ರಲ್ಲಿ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಜಿಂಬಾಬ್ವೆ ವಿರುದ್ಧ ಬುಮ್ರಾ ಕೇವಲ 11 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಇದು ಅವರ ಟಿ20 ಕ್ರಿಕೆ್ಟ್ ವೃತ್ತಿ ಜೀವನದ ಸರ್ವಶ್ರೇಷ್ಠ ಪ್ರದರ್ಶನವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com