ಟಿ20 ವಿಶ್ವಕಪ್: ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್, 85 ರನ್ ಗಳಿಗೆ ಆಲೌಟ್

ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್ ತಂಡ ಕೇವಲ 85 ರನ್ ಗಳಿಗೆ ಆಲೌಟ್ ಆಗಿದೆ.
ಭಾರತ ತಂಡ
ಭಾರತ ತಂಡ

ದುಬೈ: ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್ ತಂಡ ಕೇವಲ 85 ರನ್ ಗಳಿಗೆ ಆಲೌಟ್ ಆಗಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ತತ್ತರಿಸಿ ಕೇವಲ 85 ರನ್ ಗಳಿಗೆ ಆಲೌಟ್ ಆಗಿದೆ.

ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದ ಸ್ಕಾಟ್ಲೆಂಡ್ ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೇವಲ 13ರನ್ ಗಳಿಗೆ ಆರಂಭಿಕ ಜೋಡಿ ಬೇರ್ಪಟ್ಟರೆ, ಬಳಿಕ ಕೇವಲ 16 ರನ್ ಗಳ ಅಂತರದಲ್ಲಿ ಸ್ಕಾಟ್ಲೆಂಡ್ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಟಗಾರ ಜಾರ್ಜ್ ಮುನ್ಸೆ 24 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ನಾಯಕ ಕೊಯಿಟ್ಜರ್ ಕೇವಲ 1ರನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಬೆರ್ರಿಂಗ್ಟನ್ ಶೂನ್ಯ ಸುತ್ತಿದರೆ, ಮ್ಯಾಥ್ಯೂ ಕ್ರಾಸ್ 2 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. 

ಮಧ್ಯಮ ಕ್ರಮಾಂಕದಲ್ಲಿ ಮೆಕ್ ಲೀಡ್ (16 ರನ್) ಮತ್ತು ಮೈಕೆಲ್ ಲೀಸ್ಕ್ (21 ರನ್)ಪ್ರತಿರೋಧ ಒಡ್ಡಿದರಾದರೂ, ಜಡೇಜಾ ಮತ್ತು ಶಮಿ ಜೋಡಿ ಈ ಜೋಡಿಯನ್ನು ಬೇರ್ಪಡಿಸಿತು. ಅಂತಿಮವಾಗಿ ಸ್ಕಾಟ್ಲೆಂಡ್ ತಂಡ 17.4 ಓವರ್ ನಲ್ಲಿ 85ರನ್ ಗಳಿಸಿ ಆಲೌಟ್ ಆಯಿತು.

ಟಿ20 ವಿಶ್ವಕಪ್: ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಗೆ ಭರ್ಜರಿ ಜಯ, ಭಾರತದ ಸೆಮೀಸ್ ಕನಸು ಮತ್ತಷ್ಟು ಕಠಿಣ

ಆ ಮೂಲಕ ಭಾರತಕ್ಕೆ ಗೆಲ್ಲಲು 86ರನ್ ಗಳ ಸಾಧಾರಣ ಗುರಿ ನೀಡಿದೆ.

ಇನ್ನು ಭಾರತದ ಪರ ರವೀಂದ್ರ ಜಡೇಜಾ ಮತ್ತು ಮಹಮದ್ ಶಮಿ ತಲಾ ಮೂರು ವಿಕೆಟ್ ಕಬಳಿಸಿದರೆ, ಜಸ್ ಪ್ರೀತ್ ಬುಮ್ರಾ 2 ಮತ್ತು ಆರ್ ಅಶ್ವಿನ್ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com