
ಕೊಹ್ಲಿ-ಸೂರ್ಯಕುಮಾರ್ ಯಾದವ್
ದುಬೈ: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ತನ್ನ ಅತೀ ದೊಡ್ಡ ಗೆಲುವು ದಾಖಲಿಸಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ, 'ಈ ಸಾಧನೆ ಮಾಡಿದ ವಿಶ್ವದ 3ನೇ ತಂಡ' ಭಾರತ, ಯಾವುದು ಆ ದಾಖಲೆ?
ಹೌದು.. ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಕೇವಲ 6.3 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು 89ರನ್ ಗಳಿಸಿ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿತು. ಆ ಮೂಲಕ ಇನ್ನೂ 81 ಎಸೆತಗಳು ಬಾಕಿ ಇರುವಂತೆಯೇ ಭಾರತ ತಂಡ ಪಂದ್ಯ ಜಯಿಸಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಸ್ಕಾಟ್ವೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಆಫ್ಘನ್, ನ್ಯೂಜಿಲೆಂಡ್ ಹಿಂದಿಕ್ಕಿದ ಟೀಂ ಇಂಡಿಯಾ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಚೇಸಿಂಗ್ ನಲ್ಲಿ ಭಾರತ ತಂಡದ ಪಾಲಿಗೆ ಇದು ಅತೀ ದೊಡ್ಡ ಗೆಲುವಾಗಿದೆ.
ಈ ಹಿಂದೆ ಭಾರತ 2016ರಲ್ಲಿ ಮೀರ್ ಪುರ್ ನಲ್ಲಿ ಯುಎಇ ವಿರುದ್ಧ ಇನ್ನೂ 59 ಎಸೆತಗಳು ಬಾಕಿ ಇರುವಂತೆ ಜಯಿಸಿತ್ತು. ಇದು ಭಾರತ ತಂಡ ಚೇಸಿಂಗ್ ನಲ್ಲಿ ದಾಖಲಿಸಿದ ಅತೀ ದೊಡ್ಡ ಅಂತರದ ಗೆಲುವಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ 81 ಎಸೆತಗಳು ಇರುವಂತೆ ಜಯಿ ಆ ದಾಖಲೆಯನ್ನು ಭಾರತ ಹಿಂದಿಕ್ಕಿದೆ.
ಇದನ್ನೂ ಓದಿ: ವಿಚಿತ್ರ ದಾಖಲೆ ಬರೆದ ವಿರಾಟ್ ಕೊಹ್ಲಿ: 9 ಪಂದ್ಯಗಳಲ್ಲಿ 2 ಬಾರಿ ಟಾಸ್ ವಿನ್
ಮೂರನೇ ಸ್ಥಾನದಲ್ಲಿ 2016ರ ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯವಿದ್ದು, ಆ ಪಂದ್ಯವನ್ನು ಭಾರತ ತಂಡ ಇನ್ನೂ 41 ಎಸೆತ ಇರುವಂತೆ ಜಯಿಸಿತ್ತು.