ಮುಂಬರುವ ಟಿ-20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ 8 ತಂಡಗಳ ಲಿಸ್ಟ್ ಅಂತಿಮ!
ಅಬುಧಾಬಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. ಈ ಸೋಲಿನೊಂದಿಗೆ ಕೆರಿಬಿಯನ್ ತಂಡ ಮುಂದಿನ ವರ್ಷದ ಟಿ20 ವಿಶ್ವಕಪ್‌ನ ಸೂಪರ್-12 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
Published: 07th November 2021 02:45 PM | Last Updated: 07th November 2021 02:45 PM | A+A A-

ಸಾಂದರ್ಭಿಕ ಚಿತ್ರ
ಅಬುಧಾಬಿ: ವೆಸ್ಟ್ ಇಂಡೀಸ್ ಸೆಮಿಫೈನಲ್ ರೇಸ್ ನಿಂದ ಔಟ್ ಆಗಿದೆ. ಅಬುಧಾಬಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು.
ಇದನ್ನೂ ಓದಿ: ಟಿ-20 ವಿಶ್ವಕಪ್: ನ್ಯೂಜಿಲೆಂಡ್ ಗೆ ಎಚ್ಚರಿಕೆ ಕೊಟ್ಟ ಶೋಯೆಬ್ ಅಖ್ತರ್!
ಈ ಸೋಲಿನೊಂದಿಗೆ ಕೆರಿಬಿಯನ್ ತಂಡ ಮುಂದಿನ ವರ್ಷದ ಟಿ20 ವಿಶ್ವಕಪ್‌ನ ಸೂಪರ್-12 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಸೂಪರ್-12ರಲ್ಲಿ ನೇರ ಟಿಕೆಟ್ ಪಡೆದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಮೇಲೆ "ಕೇಕ್" ಅಟ್ಯಾಕ್, ವಿಡಿಯೋ ವೈರಲ್!
ಈ ಬಾರಿಯ ಟಿ-20 ವಿಶ್ವಕಪ್ ರೋಚಕ ತಿರುವುಗಳೊಂದಿಗೆ ಅಂತಿಮ ಘಟ್ಟದ ಹೊಸ್ತಿಲಿಗೆ ಬಂದು ನಿಂತಿದೆ. ಗ್ರೂಪ್ 1ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸೆಮಿಪೈನಲ್ ನಲ್ಲಿ ಆಡುವ ಎರಡು ತಂಡಗಳಾಗಿವೆ.
ಇದನ್ನೂ ಓದಿ: ಗಂಟು-ಮೂಟೆ ಕಟ್ಕೊಂಡು ಮನೆಗೆ ಹೋಗ್ತಿವಿ: ರವೀಂದ್ರ ಜಡೇಜಾ ಉತ್ತರ!
ಅದರಂತೆ ಗ್ರೂಪ್ 2ರಿಂದ ಈಗಾಗಲೇ ಪಾಕಿಸ್ತಾನ ತನ್ನ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ, ಇನ್ನೊಂದು ಟೀಮ್ ಯಾವುದು ಅನ್ನೋದು ಇಂದು ನಿರ್ಧಾರವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಜನಾಂಗೀಯ ನಿಂದನೆ ಆರೋಪ: ಬಿಬಿಸಿ ಶೋನಿಂದ ಮೈಕೆಲ್ ವಾನ್ ಗೆ ಗೇಟ್ ಪಾಸ್