ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ.. ಇನ್ನೇನಿದ್ದರೂ ನವೆಂಬರ್ 7ರ ಪಂದ್ಯದ ಮೇಲೆ ಗಮನ: ವಿರಾಟ್ ಕೊಹ್ಲಿ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಹಂತಕ್ಕೇರಲು ಹರಸಾಹಸ ಪಡುತ್ತಿರುವ ಟೀಂ ಇಂಡಿಯಾ ಇದೀಗ ನವೆಂಬರ್ ರಂದು ನಡೆಯಲಿರುವ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯದ ಬಳಿಕ ಪತ್ರಿಕಾಗೋಷ್ಠಿ ವೇಳೆ ವಿರಾಟ್ ಕೊಹ್ಲಿ
ಪಂದ್ಯದ ಬಳಿಕ ಪತ್ರಿಕಾಗೋಷ್ಠಿ ವೇಳೆ ವಿರಾಟ್ ಕೊಹ್ಲಿ

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಹಂತಕ್ಕೇರಲು ಹರಸಾಹಸ ಪಡುತ್ತಿರುವ ಟೀಂ ಇಂಡಿಯಾ ಇದೀಗ ನವೆಂಬರ್ ರಂದು ನಡೆಯಲಿರುವ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ.. ನಿಜಕ್ಕೂ ಇಂದಿನ ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ಮೇಲುಗೈ ಪ್ರದರ್ಶನ ತೋರಿದೆವು. ಟೂರ್ನಿಯಲ್ಲಿ ಜೀವಂತವಾಗಿ ಉಳಿಯಲು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ.. ಇನ್ನೇನಿದ್ದರೂ ನ.7ರ ಪಂದ್ಯ ಏನಾಗುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.

'ಇಂದಿನ ಪ್ರದರ್ಶನದ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ, ನಾವು ಏನು ಮಾಡಬಹುದು ಎಂದು ನಮಗೆ ತಿಳಿದಿದೆ. ಈ ಸ್ಥಳದಲ್ಲಿ ಟಾಸ್ ಎಷ್ಟು ಮಹತ್ವದ್ದಾಗಿರಬಹುದು ಎಂಬುದನ್ನು ಸಹ ನಿಮಗೆ ತಿಳಿಸುತ್ತದೆ. ನಾವು ಅವರನ್ನು ಗರಿಷ್ಠ 110-120ರನ್ ಗಳೊಳಗೆ ನಿಯಂತ್ರಿಸಬೇಕು ಎಂದು ಲೆಕ್ಕಾಚಾರ ಮತ್ತು ಗೇಮ್ ಪ್ಲಾನ್ ಮಾಡಿದ್ದೆವು.  

ಅದಕ್ಕೆ ತಕ್ಕಂತೆ ನಮ್ಮ ಬೌಲರ್ ಗಳು ಅತ್ಯುತ್ತಮ ಪ್ರದರ್ಶನ ತೋರಿದರು. ಬಳಿಕ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಮೂಲಕ ನಮಗೆ ಬೇಕಾದ ರನ್ ರೇಟ್ ತಂದರು. ನಾವು 8ರಿಂದ 10 ಓವರ್ ಗಳೊಳಗೆ ಪಂದ್ಯ ಮುಕ್ತಾಯ ಮಾಡುವ ಯೋಜನೆ ರೂಪಿಸಿದ್ದೆವು. ಆದರೆ ರೋಹಿತ್ ಮತ್ತು ರಾಹುಲ್ ಇನ್ನೂ ಬೇಗನೆ ಮುಕ್ತಾಯ ಮಾಡಲು ನೆರವಾದರು ಎಂದು ಕೊಹ್ಲಿ ಹೇಳಿದರು.

ವಿಕೆಟ್ ಕಳೆದುಕೊಂಡರೆ 20 ಎಸೆತ ವೆಚ್ಚವಾಗುತ್ತದೆ
ಇದೇ ವೇಳೆ ವಿಕೆಟ್ ಕಳೆದುಕೊಳ್ಳಬಾರದು ಎಂದು ಮೊದಲೇ ಮಾತನಾಡಿದ್ದೆವು. ಕಾರಣ ಒಮ್ಮೆ ವಿಕೆಟ್ ಬಿದ್ದರೆ ಹೊಸ ಬ್ಯಾಟರ್ ಕ್ರೀಸ್ ಗೆ ಅಂಟಿಕೊಳ್ಳಲು 10 ರಿಂದ 20 ಎಸೆತಗಳು ವೆಚ್ಚವಾಗುತ್ತದೆ. ಹೀಗಾಗಿ ಆ ಬಗ್ಗೆ ನಾವು ಜಾಗರೂಕರಾಗಿದ್ದೆವು.  ಸಹಜವಾಗಿ ಆಡಿದರೆ ಬೇಗ ರನ್ ಬರುತ್ತವೆ ಎಂದುಕೊಂಡಿದ್ದೆವು. ನೀವು ನಮ್ಮ ಅಭ್ಯಾಸ ನಡೆಸುವಾಗಲೂ ನಾವು ಇದೇ ರೀತಿ ಅಭ್ಯಾಸ ಮಾಡುತ್ತಿದ್ದೆವು. ಇದು ನಮ್ಮ ಸಹಜ ಬ್ಯಾಟಿಂಗ್.. ಆದರೆ ಒಂದೆರಡು ಪಂದ್ಯದ ಕೆಟ್ಟ ಪ್ರದರ್ಶನ ಇಡೀ ತಂಡಕ್ಕೆ ಮುಳುವಾಯಿತು ಎಂದರು.

ಒತ್ತಡ ನಿಭಾಯಿಸಿದ ಬೌಲರ್ ಗಳಿಗೆ ಮೆಚ್ಚುಗೆ
ಬೌಲರ್ ಗಳನ್ನು ಶ್ಲಾಘಿಸಿದ ಕೊಹ್ಲಿ ನಿಜಕ್ಕೂ ಬೌಲರ್ ಗಳ ಮೇಲೆ ಹೆಚ್ಚಿನ ಒತ್ತಡವಿತ್ತು. ಆದರೆ ಅದನ್ನು ಅವರು ನಿಭಾಯಿಸಿದ ರೀತಿ ಮೆಚ್ಚುವಂತದ್ದು. ಜಡೇಜಾ ಚೆನ್ನಾಗಿ ಬೌಲಿಂಗ್ ಮಾಡಿದರು, ಶಮಿ ಕೂಡ ಉತ್ತಮವಾಗಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.

ಇಲ್ಲೇ ಜನ್ಮ ದಿನಾಚರಣೆ ಸಾಕು
ಇನ್ನು ಇಂದು ಕೊಹ್ಲಿ ಅವರ ಹುಟ್ಟಿದ ದಿನವಾಗಿದ್ದು, ಈ ಬಗ್ಗೆ ಮಾತನಾಡಿದ ಕೊಹ್ಲಿ  ನನ್ನ ಕುಟುಂಬ ಇಲ್ಲಿದೆ.. ನನಗೆ ಇಲ್ಲೇ (ಹುಟ್ಟುಹಬ್ಬ) ಆಚರಣೆ ಸಾಕು ಎಂದರು. 

Related Article

ಟಿ20 ವಿಶ್ವಕಪ್: ಸ್ಕಾಟ್ವೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಆಫ್ಘನ್, ನ್ಯೂಜಿಲೆಂಡ್ ಹಿಂದಿಕ್ಕಿದ ಟೀಂ ಇಂಡಿಯಾ

ಟಿ20 ವಿಶ್ವಕಪ್: 7.1 ಓವರ್ ನಲ್ಲಿ ಭಾರತ ಗೆದ್ದರೆ, ಆಫ್ಘನ್, ನ್ಯೂಜಿಲೆಂಡ್ ಅನ್ನು ಹಿಂದಿಕ್ಕಲಿದೆ!

ಟಿ20 ವಿಶ್ವಕಪ್: ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್, 85 ರನ್ ಗಳಿಗೆ ಆಲೌಟ್

ವಿಚಿತ್ರ ದಾಖಲೆ ಬರೆದ ವಿರಾಟ್ ಕೊಹ್ಲಿ: 9 ಪಂದ್ಯಗಳಲ್ಲಿ 2 ಬಾರಿ ಟಾಸ್ ವಿನ್

ಟಿ20 ವಿಶ್ವಕಪ್: ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಗೆ ಭರ್ಜರಿ ಜಯ, ಭಾರತದ ಸೆಮೀಸ್ ಕನಸು ಮತ್ತಷ್ಟು ಕಠಿಣ

ಟಿ20 ವಿಶ್ವಕಪ್: ಟಾಸ್ ಗೆದ್ದ ಬರ್ತ್ ಡೇ ಬಾಯ್ ಕೊಹ್ಲಿ, ಭಾರತ ಫೀಲ್ಡಿಂಗ್ ಆಯ್ಕೆ

ಟಿ20 ವಿಶ್ವಕಪ್ ಬಳಿಕ ಎಲ್ಲಾ ಆವೃತ್ತಿಯ ಕ್ರಿಕೆಟ್ ನಿಂದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ನಿವೃತ್ತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com