ದಾಖಲೆ ಬರೆದ ಬಾಬರ್ ಅಜಂ, ರಿಜ್ವಾನ್ ಜೋಡಿ: ಪಾಕ್ ಪರ ವಿಶ್ವ ದಾಖಲೆ ನಿರ್ಮಾಣ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಭರ್ಜರಿ ಜಯಕ್ಕೆ ಕಾರಣವಾದ ನಾಯಕ ಬಾಬರ್ ಅಜಂ ಮತ್ತು ಮಹಮದ್ ರಿಜ್ವಾನ್ ಜೋಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಬಾಬರ್ ಅಜಂ-ರಿಜ್ವಾನ್ ಜೋಡಿ
ಬಾಬರ್ ಅಜಂ-ರಿಜ್ವಾನ್ ಜೋಡಿ

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಭರ್ಜರಿ ಜಯಕ್ಕೆ ಕಾರಣವಾದ ನಾಯಕ ಬಾಬರ್ ಅಜಂ ಮತ್ತು ಮಹಮದ್ ರಿಜ್ವಾನ್ ಜೋಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಭಾರತ ನೀಡಿದ 152 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಈ ಜೋಡಿ ಅಜೇಯ ಆಟವಾಡಿತು. ನಾಯಕ ಬಾಬರ್ ಅಜಂ 52 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರೆ, ಮಹಮದ್ ರಿಜ್ವಾನ್ 55 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದರು. ಆ ಮೂಲಕ ಈ ಜೋಡಿ ಬರೊಬ್ಬರಿ 152 ರನ್ ಗಳ ಬೃಹತ್ ಜೊತೆಯಾಟವಾಡಿತು. 

ಈ ಅಮೋಘ ಬ್ಯಾಟಿಂಗ್ ಇದೀಗ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದು, ಪಾಕಿಸ್ತಾನದ ಪರ ಟಿ20ಯಲ್ಲಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟರ್ ಜೋಡಿ ಗಳಿಸಿದ ಗರಿಷ್ಟ ರನ್ ಗಳ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ 2012ರಲ್ಲಿ ಹಫೀಜ್ ಮತ್ತು ಶೊಯೆಬ್ ಮಲ್ಲಿಕ್ ಜೋಡಿ ಗಳಿಸಿದ್ದ 106ರನ್ ಗಳ ಜೊತೆಯಾಟ ಈ ವರೆಗಿನ ಗರಿಷ್ಠ ರನ್ ಜೊತೆಯಾಟವಾಗಿತ್ತು. ಇದೀಗ ಈ ದಾಖಲೆಯನ್ನು ಬಾಬರ್ ಅಜಂ ಮತ್ತು ರಿಜ್ವಾನ್ ಜೋಡಿ ಮುರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com