ಟಿ20 ವಿಶ್ವಕಪ್: 10 ವಿಕೆಟ್ ಗಳ ಅಂತರದಲ್ಲಿ ಸೋತು ಹೀನಾಯ ದಾಖಲೆ ಬರೆದ ಭಾರತ

ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಎಂದೇ ಕರೆಯಲಾಗುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಅಂತರದ ಹೀನಾಯ ಸೋಲುಕಂಡಿದ್ದು, ಆ ಮೂಲಕ ಹೀನಾಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ.
ಟೀಂ ಇಂಡಿಯಾಗೆ ಸೋಲು
ಟೀಂ ಇಂಡಿಯಾಗೆ ಸೋಲು

ದುಬೈ: ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಎಂದೇ ಕರೆಯಲಾಗುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಅಂತರದ ಹೀನಾಯ ಸೋಲುಕಂಡಿದ್ದು, ಆ ಮೂಲಕ ಹೀನಾಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಭಾರತ ತಂಡ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ಸೋತಿದ್ದು, ಅಂತೆಯೇ ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಂಡವೊಂದರ ವಿರುದ್ಧ 10 ವಿಕೆಟ್ ಅಂತರದಲ್ಲಿ ಹೀನಾಯ ಸೋಲು ಕಂಡಂತಾಗಿದೆ.

ಈ ಹಿಂದೆ ಭಾರತ ತಂಡ 2012ರಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್ ಗಳ ಅಂತರದಲ್ಲಿ ಸೋತಿತ್ತು. ಇದು ಈ ವರೆಗಿನ ಭಾರತ ತಂಡದ ಹೀನಾಯ ದಾಖಲೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com