ಟಿ20 ವಿಶ್ವಕಪ್: ಟೀಂ ಇಂಡಿಯಾದ ಕಳಪೆ ಮೊತ್ತ..!, ಅಂಕಿಅಂಶಗಳು ಏನು ಹೇಳುತ್ತವೆ?

ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ವೈಫಲ್ಯ ಟೂರ್ನಿಯಲ್ಲಿ ಭಾರತದ ಸ್ಥಿತಿಯನ್ನು ತೂಗುಯ್ಯಾಲೆಯಲ್ಲಿ ದೂಡಿದೆ. ಇಷ್ಟಕ್ಕೂ ಕನಿಷ್ಛ ಸ್ಕೋರ್ ಮಾಡಿ ಟೀಂ ಇಂಡಿಯಾ ಗೆದ್ದ ಉದಾಹರಣೆ ಇದೆಯೇ.. ಇತಿಹಾಸ ಏನು ಹೇಳುತ್ತದೆ?
ಕಿವೀಸ್ ಬೌಲರ್ ಗಳ ಅಬ್ಬರ
ಕಿವೀಸ್ ಬೌಲರ್ ಗಳ ಅಬ್ಬರ
Updated on

ದುಬೈ: ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ವೈಫಲ್ಯ ಟೂರ್ನಿಯಲ್ಲಿ ಭಾರತದ ಸ್ಥಿತಿಯನ್ನು ತೂಗುಯ್ಯಾಲೆಯಲ್ಲಿ ದೂಡಿದೆ. ಇಷ್ಟಕ್ಕೂ ಕನಿಷ್ಛ ಸ್ಕೋರ್ ಮಾಡಿ ಟೀಂ ಇಂಡಿಯಾ ಗೆದ್ದ ಉದಾಹರಣೆ ಇದೆಯೇ.. ಇತಿಹಾಸ ಏನು ಹೇಳುತ್ತದೆ?

ಇಂದು ದುಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 110 ರನ್ ಗಳನ್ನಷ್ಟೇ ಗಳಿಸಿದೆ. ಆ ಮೂಲಕ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಕಳಪೆ ದಾಖಲೆ ನಿರ್ಮಿಸಿದ್ದು, ಇದು ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ 2ನೇ ಕನಿಷ್ಠ ರನ್ ಗಳಿಕೆಯಾಗಿದೆ. 

ಈ ಹಿಂದೆ 2016ರಲ್ಲಿ ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಕೇವಲ 79 ರನ್ ಗಳಿಸಿತ್ತು. ಇದು ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ಅತ್ಯಂತ ಕಡಿಮೆ ರನ್ ಗಳಿಕೆಯಾಗಿದೆ. ಬಳಿಕದ ಸ್ಥಾನದಲ್ಲಿ ಇಂದಿನ ಪಂದ್ಯವಿದ್ದು, ಇಲ್ಲಿ ಭಾರತ ತಂಡ 110 ರನ್ ಗಳಿಸಿದೆ. ನಂತರದ ಸ್ಥಾನದಲ್ಲಿ 2009ರಲ್ಲಿ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 118 ರನ್ ಗಳಿಸಿತ್ತು. 2014ರಲ್ಲಿ ಮೀರ್ ಪುರದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 130 ರನ್ ಗಳಿಸಿತ್ತು. ಇದು ನಾಲ್ಕನೇ ಸ್ಥಾನದಲ್ಲಿದೆ.

ಕನಿಷ್ಛ ಸ್ಕೋರ್ ಮಾಡಿ ಗೆದ್ದ ಇತಿಹಾಸ
ಇನ್ನು ಟಿ20ಯಲ್ಲಿ ಟೀಂ ಇಂಡಿಯಾ ಕಡಿಮೆ ಸ್ಕೋರ್ ಮಾಡಿ ಗೆದ್ದ ಉದಾಹರಣೆ ಅಷ್ಟಿಲ್ಲ.. ಆದರೆ 2016ರಲ್ಲಿ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ 139 ರನ್ ಗಳಿಸಿ ಜಯ ಸಾಧಿಸಿತ್ತು. ಇದು ಟೀಂ ಇಂಡಿಯಾ ಕಡಿಮೆ ಸ್ಕೋರ್ ಮಾಡಿ ಗೆದ್ದ ಪಂದ್ಯದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇನ್ನು 2017ರಲ್ಲಿ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ 144ರನ್ ಇಂಗ್ಲೆಂಡ್ ವಿರುದ್ಧ ಗೆದ್ದಿತ್ತು. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 146 ರನ್ ಗಳಿಸಿ ಬಾಂಗ್ಲಾದೇಶದ ವಿರುದ್ಧ ಜಯ ಗಳಿಸಿತ್ತು.

ಈ ಎಲ್ಲ ಅಂಕಿಅಂಶಗಳನ್ನು ನೋಡಿದರೆ ಭಾರತ ಇಂದಿನ ಪಂದ್ಯ ಗೆಲ್ಲುವುದು ಕಷ್ಟಕರ ಸಂಗತಿ ಎಂಬುದೇ ತಿಳಿಯುತ್ತದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com