ಏಷ್ಯಾ ಕಪ್ 2022: ಕೊಹ್ಲಿ ಅರ್ಧಶತಕ, ಪಾಕ್ ಗೆ 182 ರನ್ ರನ್ ಗುರಿ 

ಭಾರತ- ಪಾಕಿಸ್ತಾನ ನಡುವೆ ನಡೆಯುತ್ತಿರುವ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ಭಾರತ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 181 ರನ್ ಗಳಿಗೆ ಕಟ್ಟಿಹಾಕಿತು. 
ಭಾರತ-ಪಾಕ್ ಪಂದ್ಯ
ಭಾರತ-ಪಾಕ್ ಪಂದ್ಯ
Updated on

ದುಬೈ: ಭಾರತ- ಪಾಕಿಸ್ತಾನ ನಡುವೆ ನಡೆಯುತ್ತಿರುವ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ಭಾರತ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 181 ರನ್ ಗಳಿಗೆ ಕಟ್ಟಿಹಾಕಿತು. 

ಭಾರತದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮ, ಸಾಧಾರಣ ಆರಂಭ ನೀಡಿದರು. ನಂತರ ಬಂದ  ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್ ಗಳಿಸಿ ಭಾರತಕ್ಕೆ ಹೆಚ್ಚಿನ ರನ್ ಗಳಿಸಲು ನೆರವಾದರು.

ಇದನ್ನೂ ಓದಿ: ಏಷ್ಯಾ ಕಪ್ 2022: ಸೂಪರ್ 4 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕ್ 
ಆದರೆ ಸೂರ್ಯಕುಮಾರ್ ಯಾದವ್ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಪಾಕ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ.  ಪರಿಣಾಮ, ನಿಗದಿತ 20 ಓವರ್ ಗಳಲ್ಲಿ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com