ಏಷ್ಯಾ ಕಪ್ 2022: ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ರೋಚಕ ಜಯ

ಏಷ್ಯಾ ಕಪ್ 2022 ಟೂರ್ನಿಯ ಇಂದಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 5 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. 
ಭಾರತಕ್ಕೆ ಜಯ
ಭಾರತಕ್ಕೆ ಜಯ

ದುಬೈ: ಏಷ್ಯಾ ಕಪ್ 2022 ಟೂರ್ನಿಯ ಇಂದಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 5 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.

ಪಾಕಿಸ್ತಾನ ನೀಡಿದ 148 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ವಿರಾಟ್ ಕೊಹ್ಲಿ (35) ಸಮಯೋಚಿತ ಬ್ಯಾಟಿಂಗ್ ಹಾಗೂ ಹಾರ್ದಿಕ್ ಪಾಂಡ್ಯಾ (ಆಜೇಯ 33) ಆಲ್ರೌಂಡ್ ಪ್ರದರ್ಶನದ ನೆರವಿನಿಂದ 19.5 ಓವರ್ ನಲ್ಲಿ  148 ರನ್ ಗಳಿಸಿ 5 ವಿಕೆಟ್ ಗಳ ರೋಚಕ ಜಯ ಸಾಧಿಸಿತು.

ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಶೂನ್ಯಕ್ಕೇ ಆರಂಭಿಕ ಆಟಗಾರ ಕೆಎಲ್ ರಾಹುಲ್ ಔಟಾಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ, ಕೊಹ್ಲಿ ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ಕೊಹ್ಲಿಯದ್ದೇ ಸಿಂಹಪಾಲಿತ್ತು. ಈ ಹಂತದಲ್ಲಿ 12 ರನ್ ಗಳಿಸಿದ್ದ ರೋಹಿತ್ ಶರ್ಮಾ ನವಾಜ್ ಬೌಲಿಂಗ್ ನಲ್ಲಿ ಔಟಾದರು. ರೋಹಿತ್ ಬೆನ್ನಲ್ಲೇ 35 ರನ್ ಗಳಿಸಿದ್ದ ಕೊಹ್ಲಿ ಕೂಡ ಇದೇ ನವಾಜ್ ಬೌಲಿಂಗ್ ನಲ್ಲಿ ಔಟಾಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

ಕೊಹ್ಲಿ ಬಳಿಕ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ (18) ಮತ್ತು ರವೀಂದ್ರ ಜಡೇಜಾ (35) ಜೋಡಿ 39 ರನ್ ಗಳ ಅಮೂಲ್ಯ ಜೊತೆಯಾಟವಾಡಿತು. ಈ ಹಂತದಲ್ಲಿ ನಸೀಮ್ ಶಾ ಬೌಲಿಂಗ್ ನಲ್ಲಿ ಸೂರ್ಯಕುಮಾರ್ ಯಾದವ್ ಔಟಾದರು. ಈ ಹಂತದಲ್ಲಿ ಜಡೇಜಾ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಗಟ್ಟಿಯಾಗಿ ನೆಲೆನಿಂತು ಮತ್ತೆ ಗೆಲುವು ಭಾರತದತ್ತ ವಾಲುವಂತೆ ಮಾಡಿದರು. ನಿಧಾನವಾಗಿಯೇ ಇನ್ನಿಂಗ್ಸ್ ಕಟ್ಟಿದ ಈ ಜೋಡಿ 40 ರನ್ ಗಳ ಅಮೋಘ ಜೊತೆಯಾಟ ನೀಡಿತು. ಗೆಲ್ಲಲು ಒಂದು ಓವರ್ ನಲ್ಲಿ ಕೇವಲ 7 ರನ್ ಗಳ ಅಗತ್ಯವಿದ್ದಾಗ 35 ರನ್ ಗಳಿಸಿದ್ದ ಜಡೇಜಾರನ್ನು ನವಾಜ್ ಕ್ಲೀನ್ ಬೋಲ್ಡ್ ಮಾಡಿದರು. ಆಗ ಮತ್ತೆ ಭಾರತ ಪಾಳಯದಲ್ಲಿ ಸೋಲಿನ ಭೀತಿ ಕವಿಯಿತು.

ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಭಾರಿಸುವ ಮೂಲಕ ತಂಡಕ್ಕೆ ವಿರೋಚಿತ ಗೆಲುವು ತಂದುಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com