ಭಾರತ–ಇಂಗ್ಲೆಂಡ್‌: 5ನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ದಾಖಲೆ, ಈ ಬಾರಿ ಪೂಜಾರ!

ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಾಖಲೆಗಳ ಸುರಿಮಳೆ ಮುಂದುವರೆದಿದ್ದು ಈ ಬಾರಿ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ದಾಖಲೆ  ಬರೆದಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ

ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಾಖಲೆಗಳ ಸುರಿಮಳೆ ಮುಂದುವರೆದಿದ್ದು ಈ ಬಾರಿ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಬರ್ಮಿಂಗ್‌ಹ್ಯಾಮ್‌ನ ಎಡ್ಜ್ ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ಅವರು ಅರ್ಧಶತಕ ಗಳಿಸಿದರು. ಈ ಮೂಲಕ ಅವರು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಎಡ್ಜ್ ಬಾಸ್ಟನ್‌ ಅಂಗಳದಲ್ಲಿ 36 ವರ್ಷಗಳ ಬಳಿಕ ಭಾರತದ ಆರಂಭಿಕರೊಬ್ಬರು ಗಳಿಸಿದ ಮೊದಲ ಟೆಸ್ಟ್‌ ಅರ್ಧಶತಕ ಇದಾಗಿದೆ. ಇದಕ್ಕೂ ಮೊದಲು, ಸುನಿಲ್ ಗವಾಸ್ಕರ್ ಅವರು 1986 ರಲ್ಲಿ ಎಜ್‌ಬಾಸ್ಟನ್‌ನಲ್ಲಿ ಟೆಸ್ಟ್ ಅರ್ಧಶತಕ ಸಿಡಿಸಿದ್ದರು. ಅವರೇ ಕೊನೆ. ಅಲ್ಲಿಂದೀಚೆಗೆ ಯಾವೊಬ್ಬ ಓಪನರ್‌ ಕೂಡ ಈ ಅಂಗಳದಲ್ಲಿ ಅರ್ಧಶತಕ ಗಳಿಸಿರಲಿಲ್ಲ. ಈ ಮಧ್ಯೆ, 2011ರಲ್ಲಿ ಗೌತಮ್‌ ಗಂಭೀರ್‌ ಅವರು 38(64) ಗಳಿಸಿದ್ದೇ ಭಾರತದ ಓಪನರ್‌ಗಳ ಈ ವರೆಗಿನ ಅತ್ಯಧಿಕ ಸ್ಕೋರ್‌ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com