2ನೇ ಟಿ20: ಐರ್ಲೆಂಡ್ ವಿರುದ್ಧ ಬೃಹತ್ ಮೊತ್ತದ ಹೊರತಾಗಿಯೂ 2 ವಿಚಿತ್ರ ದಾಖಲೆ ಬರೆದ ಭಾರತ!

ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಬೃಹತ್ ಮೊತ್ತ ಪೇರಿಸಿ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿದೆ. ಅಂತೆಯೇ ಭಾರತ ತಂಡ 2 ವಿಚಿತ್ರ ದಾಖಲೆ ಬರೆದಿದೆ.
ಟೀಂ ಇಂಡಿಯಾಗೆ ಜಯ
ಟೀಂ ಇಂಡಿಯಾಗೆ ಜಯ

ಡಬ್ಲಿನ್: ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಬೃಹತ್ ಮೊತ್ತ ಪೇರಿಸಿ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿದೆ. ಅಂತೆಯೇ ಭಾರತ ತಂಡ 2 ವಿಚಿತ್ರ ದಾಖಲೆ ಬರೆದಿದೆ.

ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಭರ್ಜರಿ ದಾಖಲೆ ಬರೆದಿದೆ. ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಮಾರ್ಕ್ ಅಡೇರ್ ಆರಂಭಿಕ ಆಘಾತ ನೀಡಿದ್ದರು.  ಈ ಹಂತದಲ್ಲಿ ಭಾರತದ ಪರ ಎರಡನೇ ವಿಕೆಟ್‌ಗೆ ಜೊತೆಯಾದ ದೀಪಕ್ ಹೂಡಾ ಮತ್ತು ಸ್ಯಾಮ್ಸನ್‌ ದಾಖಲೆಯ 176 ರನ್‌ ಸೇರಿಸಿದರು. 

ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 77 ರನ್ ಸಿಡಿಸಿದರೆ, 2 ವಿಕೆಟ್ ಗೆ ಸ್ಯಾಮ್ಸನ್ ಜೊತೆಗೂಡಿದ ದೀಪಕ್ ಹೂಡಾ 57 ಎಸೆತಗಳಲ್ಲಿ 6 ಸಿಕ್ಸರ್, 9 ಬೌಂಡರಿಗಳ ನೆರವಿನಿಂದ 104ರನ್ ಸಿಡಿಸಿದರು. ಅಂತೆಯೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದ ಭಾರತದ 4ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಈ ಜೋಡಿ 3ನೇ ವಿಕೆಟ್ ಗೆ 176ರನ್ ಕಲೆ ಹಾಕಿತು. ಈ ಜೋಡಿಯ ಉತ್ತಮ ಜೊತೆಯಾಟದ ನೆರವಿನಿಂದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು.

ಇದು ಐರ್ಲೆಂಡ್ ಗೆ ತಂಡವೊಂದು ಗಳಿಸಿದ 2ನೇ ಅತೀ ದೊಡ್ಡ ರನ್ ಗಳಾಗಿದೆ. ಈ ಹಿಂದೆ 2013ರಲ್ಲಿ ಅಬುದಾಬಿಯಲ್ಲಿ ಆಫ್ಘಾನಿಸ್ತಾನ 225ರನ್ ಕಲೆ ಹಾಕಿತ್ತು. 2017ರಲ್ಲಿ ದುಬೈನಲ್ಲಿ ಸ್ಕಾಟ್ಲೆಂಡ್ ತಂಡ 211ರನ್ ಕಲೆ ಹಾಕಿತ್ತು. ಬಳಿಕ 2019 ಅಲ್ ಅಮೆರಾತ್ ನಲ್ಲಿ ಹಾಂಕಾಂಗ್ ತಂಡ 208 ರನ್ ಮತ್ತು 2020ರಲ್ಲಿ ವಿಂಡೀಸ್ ತಂಡ 208ರನ್ ಕಲೆ ಹಾಕಿತ್ತು.

T20Iಯ ಮೊದಲು ಬ್ಯಾಟಿಂಗ್ ಮಾಡಿ 220ಕ್ಕೂ ಹೆಚ್ಚು ಸ್ಕೋರ್ ಮಾಡಿ ಕಡಿಮೆ ಅಂತರದ ಗೆಲುವು:
ಇನ್ನು ಇದೇ ಪಂದ್ಯ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದ್ದು, T20Iಯ ಮೊದಲು ಬ್ಯಾಟಿಂಗ್ ಮಾಡಿ 220ಕ್ಕೂ ಹೆಚ್ಚು ಸ್ಕೋರ್ ಮಾಡಿ ಕಡಿಮೆ ಅಂತರದ ಗೆಲುವು ಪಡೆದ ತಂಡಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ ವಿಂಡೀಸ್ ತಂಡ ಅಗ್ರ ಸ್ಥಾನದಲ್ಲಿದ್ದು, 2016ರಲ್ಲಿ ಭಾರತದ ವಿರುದ್ಧ ವಿಂಡೀಸ್ ತಂಡ 220ಕ್ಕೂ ಹೆಚ್ಚು ರನ್ ಕಲೆಹಾಕಿ ಕೇವಲ 1ರನ್ ಅಂತರದಲ್ಲಿ ಗೆಲುವು ಸಾಧಿಸಿತ್ತು. ಇದೇ 2022ರಲ್ಲಿ ಬ್ರಿಡ್ಜ್ ಟೌನ್ ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ 20ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com